ಬಾಗಲಕೋಟೆ, ಫೆ.24 (DaijiworldNews/PY) : "ಈಗಿನ ಕಾಂಗ್ರೆಸ್ಸೇ ಬೇರೆ, ಆಗಿನ ಕಾಂಗ್ರೆಸ್ಸೇ ಬೇರೆ. ಈ ಕಾಂಗ್ರೆಸ್ಗೂ, ಆ ಕಾಂಗ್ರೆಸ್ಗೂ ಏನು ಸಂಬಂಧವಿಲ್ಲ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಬಾದಾಮಿ ಪಟ್ಟಣದಲ್ಲಿ ವಿಶ್ವ ಚೇತನ ಸಂಸ್ಥೆ ಆಯೋಜಿಸಿದ್ದ ಚುನಾವಣಾ ರಾಜಕಾರಣ, ಪ್ರಜಾಪ್ರಭುತ್ವ, ಮಾನವೀಯತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರು, ಗಾಂಧೀಜಿ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ್ದ ಕಾಂಗ್ರೆಸ್ಸೇ ಬೇರೆ. ಈಗ ನಾವಿರೋ ಕಾಂಗ್ರೆಸ್ಸೆ ಬೇರೆ. ಈ ಕಾಂಗ್ರೆಸ್ಗೂ ಆ ಕಾಂಗ್ರೆಸ್ಗೂ ಏನೂ ಸಂಬಂಧ ಇಲ್ಲ. ಈಗಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್" ಎಂದು ಬಾಯಿ ಸನ್ನೆ ಮೂಲಕ ತಿಳಿಸಿದ್ದಾರೆ.
"ನಾನು ಯಾರ ಹೆಸರನ್ನೂ ಹೇಳೋಕೆ ಬಯಸುವುದಿಲ್ಲ. ಸತ್ಯವನ್ನು ನಿಮಗೆ ಪರಿಚಯ ಮಾಡಿಸಿಕೊಡುತ್ತಿದ್ದೇನೆ. ಅಂದು ಅವರೆಲ್ಲಾ ತ್ಯಾಗ ಮಾಡದಿದ್ದರೆ, ನೀವೆಲ್ಲಾ ಇರುತ್ತಿರಲಿಲ್ಲ. ನಾವೆಲ್ಲಾ ಅವರ ತ್ಯಾಗವನ್ನು ನೆನಪಿಸಿಕೊಳ್ಳಬೇಕಿದೆ. ಅನ್ನ ತಿನ್ನುವ ಬಾಯಿಯಲ್ಲಿ ನೆಹರೂ, ಗಾಂಧಿ, ಅಂಬೇಡ್ಕರ್ ಅವರ ಬಗ್ಗೆ ಕೆಟ್ಟದನ್ನು ಮಾತನಾಡಬೇಡಿ" ಎಂದು ಹೇಳಿದರು.
"ನೀವೆಲ್ಲಾ ಬುದ್ದಿವಂತರು. ನನ್ನ ಮಾತಿನಲ್ಲಿ ತಪ್ಪಿದ್ದರೆ, ನನಗೆ ತಿಳಿಸಿ, ಇದರಿಂದ ತಪ್ಪನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ" ಎಂದರು.