ನವದೆಹಲಿ, ಫೆ.25 (DaijiworldNews/PY) : ಜಾರ್ಖಂಡ್ನಲ್ಲಿ ಹಸಿವಿನಿಂದ ಬಾಲಕಿಯೊಬ್ಬಳು ಸಾವನ್ನಪ್ಪಿದ ಆರೋಪ, ದೇಶಾದ್ಯಂತ ಮೂರು ಕೋಟಿ ಬಡವರ ಪಡಿತರ ಚೀಟಿ ರದ್ದುಪಡಿಸಲಾಗಿದೆ ಎನ್ನುವ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಇದು ಒಂದು ಸುಳ್ಳು ಆರೋಪ ಎನ್ನುವುದನ್ನು ಸಾಬೀತುಪಡಿಸಲು ಸಿದ್ದ ಎಂದು ಸುಪ್ರೀ ಕೋರ್ಟ್ನಲ್ಲಿ ತಿಳಿಸಿದೆ.
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಆಧಾರ್ ಇಲ್ಲದ ಕಾರಣಕ್ಕೆ ಪಡಿತರ ಆಹಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಜಾರ್ಖಂಡ್ನಲ್ಲಿ ಹಸಿವಿನಿಂದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಚೀಟಿ ರದ್ದು ಪಡಿಸಿರುವ ಅಂಕಿ-ಅಂಶಗಳು ಸಹ ತಪ್ಪು ಎಂದು ಹೇಳಿದ್ದಾರೆ.