ವಿಜಯಪುರ, ಫೆ.25 (DaijiworldNews/PY) : "ಬಿಜೆಪಿಯ ಕೆಲ ಶಾಸಕರಲ್ಲಿ ಅಸಮಾಧಾನ ಇರುವುದು ಸತ್ಯ. ಆದರೆ, ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲಾರೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಕರ್ನಾಟಕ ಸ್ವರ್ಗ ಆಗುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿ ಹೇಳಿಕೆ ಪ್ರತಿಕ್ರಿಯೆ ನೀಡಿ, ಹಾಗಾದರೆ ಕರ್ನಾಟಕ ಸ್ವರ್ಗ ಆಯ್ತಾ" ಎಂದು ಕೇಳಿದರು.
"ಕಟೀಲ್ಗೆ ರಾಜಕೀಯ ಜ್ಞಾನ ಇಲ್ಲ, ಅವರಿಗೆ ಅಧ್ಯಕ್ಷ ಸ್ಥಾನ ಹೇಗೆ ಕೊಟ್ಟರೋ ತಿಳಿದಿಲ್ಲ" ಎಂದು ಕಾಂಗ್ರೆಸ್ ಮುಳುಗುತ್ತಿರುವ ಹಡಗು' ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, "ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಉತ್ತರ, ದಕ್ಷಿಣ ಕರ್ನಾಟಕದವರನ್ನು ಪರಿಗಣಿಸುವ ಸಂಬಂಧ ಚರ್ಚೆಗಳು ನಡೆದಿವೆ" ಎಂದರು.
"ಡೊನಾಲ್ಡ್ ಟ್ರಂಪ್ ಅವರಿಗೆ ಭದ್ರತೆ ನೀಡುವುದರಲ್ಲಿ ಯಾವ ತಪ್ಪಿಲ್ಲ. ಬಿಜೆಪಿಯ ಬಳಿ ಟ್ರಂಪ್ಗೆ ತೋರಿಸಲು ಏನೂ ಇಲ್ಲ, ಅವರು ಅಭಿವೃದ್ದಿಯೇ ಮಾಡಿಲ್ಲ. ಹಾಗಾಗಿ ಸಾಬರಮತಿ ಆಶ್ರಮ, ತಾಜ್ಮಹಲ್ ತೋರಿಸಿದ್ದಾರೆ" ಎಂದು ಹೇಳಿದರು.
"ಕೇಂದ್ರದ ಮೇಲೆ ಮಹದಾಯಿ ನೀರು ಹಂಚಿಕೆ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಒತ್ತಡ ಹಾಕಬೇಕು. ಸಿಎಂ, ಸಂಸದರು ನಿಯೋಗಕ್ಕೆ ತೆರಳಿ ಕೇಂದ್ರದ ಮೇಲೆ ಒತ್ತಡ ಹಾಕಬೇಕು" ಎಂದರು.