ಬೆಂಗಳೂರು, ಫೆ.25 (DaijiworldNews/PY) : ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಅವರು ಪರ್ತಕರ್ತೆ ಗೌರಿ ಲಂಕೇಶ್ ಅವರಂತೆ ಆಗಲು ನಿರ್ಧರಿಸಿದ್ದಳು ಎಂಬ ಮಾಹಿತಿ ಪೊಲೀಸ್ ತನಿಖೆ ಸಂದರ್ಭ ತಿಳಿದುಬಂದಿದೆ.
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾದ ಬಳಿಕ ಅಮೂಲ್ಯ ಅವರು ಹಲವಾರು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಅಮೂಲ್ಯ ನಾನು ಗೌರಿ ಕಾರ್ಯಕ್ರಮದಿಂದ ಪ್ರಭಾವಿತಳಾಗಿದ್ದಳು. ಇದಲ್ಲದೆ, ಪ್ರಗತಿಪರ ಚಿಂತಕರ ಮಾತುಗಳಿಗೆ ಪ್ರೇರಿತಳಾಗಿ ಎಡಪಂಥೀಯ ಸಿದ್ಧಾಂತವನ್ನು ಬೆಳೆಸಿಕೊಂಡಿದ್ದಳು. ಈ ಹಿಂದೆ ಅಮೂಲ್ಯ ಅವರು ಗೌರಿ ಲಂಕೇಶ್ ಅವರ ವಿವಿಧ ಭಾಷಣಗಳನ್ನು ಕೇಳಿ ಅವರಂತೆ ಇರಬೇಕೆಂದು ಬಯಸಿದ್ದಳು ಎಂದು ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾಳೆ.
ಗೌರಿ ಲಂಕೇಶ್ ಅವರಂತೆ ಪತ್ರಕರ್ತರಾಗಲು ಅಮೂಲ್ಯ ಪತ್ರಿಕೋದ್ಯಮದಲ್ಲಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಓದಿದ್ದರು. ತಾನು ಕೂಡಾ ಲಂಕೇಶ್ ರೀತಿ ಆಗುತ್ತೇನೆಂದು ತನ್ನ ಸ್ನೇಹಿತರೊಂದಿಗೆ ಈ ವಿಷಯವನ್ನು ಹೇಳಿಕೊಂಡಿದ್ದಳು. ಅಮೂಲ್ಯಳ ಸ್ನೇಹಿತರ ವಿಚಾರಣೆ ವೇಳೆ ಪೊಲೀಸರಿಗೆ ಈ ಮಾಹಿತಿ ಲಭ್ಯವಾಗಿದೆ.
ಫ್ರೀಡಂ ಪಾರ್ಕ್ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಸಂಘಟಕರು ತಾವು ಕಾರ್ಯಕ್ರಮಕ್ಕೆ ಅಮೂಲ್ಯ ಅವರನ್ನು ಆಹ್ವಾನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಇದು ಸಂಘಟಕರ ಒಂದು ಸುಳ್ಳು ಎಂಬುದು ಸಾಬೀತಾಗಿದೆ. ಅಮೂಲ್ಯಳ ಬಳಿ ಇದ್ದ ವಿಐಪಿ ಪಾಸ್ ಹಾಗೂ ಟ್ಯಾಗ್ಅನ್ನು ಪೊಲೀಸರು ವಶಪಡಿಕೊಂಡಿದ್ದಾರೆ. ಆಯೋಜಕರು ತಪ್ಪು ಮಾಹಿತಿ ನೀಡಿದ್ದರಿಂದ ಪೊಲೀಸರು ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು. ಜೈಲಿನಿಂದ ಅಮೂಲ್ಯಳನ್ನು ಕರೆತಂದು ಸಂಪೂರ್ಣವಾಗಿ ವಿಚಾರಣೆ ನಡೆಸಲು ಎಸ್ಐಟಿ ಚಿಂತನೆ ನಡೆಸಿದೆ.