ಬೆಂಗಳೂರು, ಫೆ.27 (DaijiworldNews/PY) : ರೌಡಿಶೀಟರ್ ಸ್ಲಂ ಭರತ್ನನ್ನು ಬಂಧಿಸಿ, ಬೆಂಗಳೂರಿಗೆ ಕರೆತರುವ ಸಂದರ್ಭ ಗುರುವಾರ ಮುಂಜಾನೆ ಪೊಲೀಸರನ್ನು ಯಾಮಾರಿಸಿ ಪರಾರಿಯಾಗಿದ್ದ ಈ ಸಂದರ್ಭ ಆತನನ್ನು ಬೆನ್ನತ್ತಿದ ಪೊಲೀಸರು ಸೋಲದೇವನಹಳ್ಳಿ ಬಳಿ ಸ್ಲಂ ಭರತ್ ಮೇಲೆ ಫೈರಿಂಗ್ ನಡೆಸಿದ್ದರು. ಈ ಸಂದರ್ಭ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಗುಂಡೇಟು ತಿಂದು ಕುಸಿದು ಬಿದ್ದಿದ್ದ ಭರತ್ನನ್ನು ಮೊದಲು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆತ ಚಿಕಿತ್ಸೆ ಫಲಾಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಭರತ್ ಉತ್ತರ ಪ್ರದೇಶದಲ್ಲಿ ಬಂಧಿಯಾಗಿದ್ದು, ಆತನನ್ನು ಎರಡು ವಾಹನಗಳಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭ ಪೀಣ್ಯ ಬಳಿ ಭರತ್ನ ಗ್ಯಾಂಗ್ನವರು 2 ಕಾರುಗಳಲ್ಲಿ ಬಂದು ಪೊಲೀಸರ ಕಾರನ್ನು ಅಡ್ಡಗಟ್ಟಿ, ಅವರ ಮೇಲೆ ಗುಂಡು ಹಾರಿಸಿದ್ದರು.
ಇದರಿಂದ ಪೊಲೀಸರು ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾದಾಗ ಅವರ ವಶದಲ್ಲಿದ್ದ ಸ್ಲಂ ಭರತ್ ಪೊಲೀಸರ ಕೈ ಕಚ್ಚಿ ತನ್ನ ಗ್ಯಾಂಗ್ನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದ.
ನಸುಕಿನ ಜಾವ 5 ಗಂಟೆಗೆ ವಯರ್ ಲೆಸ್ ಮೂಲಕ ದೊರಕಿದ ಮಾಹಿತಿ ಪ್ರಕಾರ ಕಾರು ಹೆಸರುಘಟ್ಟ ಬಳಿ ಗುರುತಿಸಲಾಗಿದ್ದು, ಬೆನ್ನಟ್ಟಿದ ರಾಜಗೋಪಾಲನಗರ ಠಾಣೆ ಇನ್ಸ್ಪೆಕ್ಟರ್, ಕಾರನ್ನು ಅಡ್ಡಗಟ್ಟಿದಾಗ ಭರತ್ ಮೂರು ಸುತ್ತು ಗುಂಡು ಹೊಡೆದಿದ್ದಾನೆ. ಆದರೆ, ಇನ್ಸ್ಪೆಕ್ಟರ್ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಭರತ್ ಹೊಡೆದ ಎರಡು ಗುಂಡು ಕಾರುಗಳ ಮೇಲೆ ಬಿದ್ದಿದೆ. ಇನ್ನೊಬ್ಬ ಇನ್ಸ್ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ, ಎರಡು ಗುಂಡುಗಳನ್ನು ಭರತ್ ಮೇಲೆ ಹಾರಿಸಿದ್ಧಾರೆ. ಗುಂಡು ತಗುಲಿದ ಭರತ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿದ್ದಾರೆ.