ಬೆಂಗಳೂರು, ಫೆ 27 (Daijiworld News/MB) : ಸ್ವಾತಂತ್ಯ್ರ ಹೋರಾಟಗಾರ ದೊರೆಸ್ವಾಮಿಯವರು ನಕಲಿ ಹೋರಾಟಗಾರ ಎಂದು ಟೀಕೆ ಮಾಡಿ ಹಲವಾರು ಜನರ ವಿರುದ್ಧಕ್ಕೆ ಗುರಿಯಾದ ಯತ್ನಾಳ್ ಈಗ ಮತ್ತೆ ದೊರೆಸ್ವಾಮಿ ವಿರುದ್ಧವಾಗಿ ಮಾತನಾಡಿದ್ದಾರೆ.
ಈ ಕುರಿತಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದಿರುವ ಅವರು, "ದೊರೆಸ್ವಾಮಿ ಬಗ್ಗೆ ಹೇಳುವುದಾದರೆ ಸ್ವಾತಂತ್ರ್ಯ ಹೋರಾಟಗಾರರು ದೇಶದ ಪರವಾಗಿ ಇರುತ್ತಾರೆ ಇವರು ಯಾವಗ ದೇಶದ ಪರವಾಗಿ ಧ್ವನಿ ಎತ್ತಿದ್ದಾರೆ. ದಯಮಾಡಿ ನಮ್ಮ ಜನರಿಗೆ ಬಹಿರಂಗ ಪಡಿಸಿ, ದೊರೆಸ್ವಾಮಿಯವರು ಯಾವ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎಂಬುದು ನಮಗೆ ಗೊತ್ತು" ಎಂದು ಹೇಳಿದ್ದಾರೆ.
ಈ ಪೋಸ್ಟ್ನ ಆರಂಭದಲ್ಲೇ, "ಮಾನ್ಯ ಸಿದ್ದರಾಮಯ್ಯ ನವರೆ ಮತ್ತು ಕಾಂಗ್ರೆಸ್ನ ಬುದ್ಧಿಜೀವಿಗಳೆ ನಾನು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ, ದಯಮಾಡಿ ಉತ್ತರಿಸಿ" ಎಂದು ಹೇಳಿದ್ದು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.
"ಭಯೋತ್ಪಾದಕ ಅಫ್ಜಲ ಗುರು ಬಗ್ಗೆ ಜೆಎನ್ಯುವಿನಲ್ಲಿ ಹಮ್ ಶೆರಮಿಂದಾ ಹಯ್ಯ ತೇರಾ ಖಾತಿಲ ಜಿಂದಾ ಹಯ್ಯ ಅಂತಾ ಘೋಷಣೆ ಕೂಗಿದಾಗ ಯಾಕೆ ನೀವು ಹೋರಾಟ ಮಾಡಲಿಲ್ಲಾ? ದೇಶ ತೇರಾ ತುಕಡೆ ಹೋಂಗೆ ಇನಶಾ ಅಲ್ಲಾ ಇನಶಾ ಅಲ್ಲಾ ಅಂತಾ ಘೋಷಣೆ ಕೂಗಿದ ದೇಶದ್ರೊಹಿಗೆ ನಿಮ್ಮ ಪಕ್ಷದ ನಾಯಕ ರಾಹುಲ ಗಾಂಧಿ ಸಮರ್ಥನೆ ನೀಡಿದಾಗ ಯಾಕೆ ಹೋರಾಟ ಮಾಡಲಿಲ್ಲಾ? ಶಾಯಿನಭಾಗ್ನಲ್ಲಿ ಜಿನ್ನಾ ವಾಲಿ ಆಜಾದಿ ಎಂದು ಘೋಷಣೆ ಕೂಗಿದಾಗ ನೀವೆಲ್ಲಾ ಯಾಕೆ ಬೀದಿಗೆ ಇಳಿದು ಹೋರಾಟ ಮಾಡಲಿಲ್ಲ? ಕಾಂಗ್ರೆಸ್ ಪಕ್ಷದ ಸದಸ್ಯರು ಪೋಷಿಸಿ ಬೆಳೆಸಿದ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ ಜಿಂದಾಬಾದ್ ಎಂದು ದೇಶ ದ್ರೋಹ ಘೋಷಣೆ ಕೂಗಿದಾಗ ಯಾಕೆ ಬೀದಿಗಿಳಿದು ಹೋರಾಟ ಮಾಡಲಿಲ್ಲಾ?" ಎಂದು ಪ್ರಶ್ನಿಸಿದ್ದಾರೆ.
ನಮ್ಮ ದೇಶ, ನಮ್ಮ ದೇಶದ ಸೈನಿಕ, ನಮ್ಮ ಪೋಲಿಸರ ಬಗ್ಗೆ ಯಾರೇ ಅವಹೇಳನ ಮಾಡುವ ಪ್ರಯತ್ನ ಮಾಡಿದರೆ ಅವರ ವಿರುದ್ಧ ನಾನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.