ರಾಮೇಶ್ವರ, ಫೆ 27 (Daijiworld News/MB) : ಅಕ್ರಮವಾಗಿ ಭಾರತೀಯ ಸಮುದ್ರದ ಮೂಲಕ ಭಾರತಕ್ಕೆ ಪ್ರವೇಶ ಮಾಡಿದ ಐದು ಮಂದಿ ಶ್ರೀಲಂಕಾ ಪ್ರಜೆಗಳನ್ನು ನೌಕಾದಳದ ಹೆಲಿಕಾಫ್ಟರ್ ಪತ್ತೆ ಹಚ್ಚಿ ಇಲ್ಲಿನ ಕರಾವಳಿ ಕಾವಲು ಪಡೆ ವಶಕ್ಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಧನುಸ್ಕೋಟಿಯ ಸಮುದ್ರ ತೀರದ ಅರಿಚಲ್ ಮುನೈ ಎಂಬ ಪ್ರದೇಶದಲ್ಲಿ ಭಾರತೀಯ ನೌಕಾದಳದ ಕಣ್ಗಾವಲು ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಯಾಂತ್ರಿಕ ದೋಣಿಯೊಂದು ಸಂಚಾರ ಮಾಡುತ್ತಿರುವುವುದ ಗಮನಕ್ಕೆ ಬಂದಿದೆ.
ಆ ಕೂಡಲೇ ನೌಕಾದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅಪರಿಚಿತರನ್ನು ವಿಚಾರಿಸಿದಾಗ ಅವರೆಲ್ಲರೂ ಶ್ರೀಲಂಕಾ ಪ್ರಜೆಗಳಾಗಿದ್ದು ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡುತ್ತಿರುವುದು ತಿಳಿದು ಬಂದಿದೆ. ತಕ್ಷಣ ಅವರನ್ನು ತಮಿಳುನಾಡಿನ ಕರಾವಳಿ ಕಾವಲು ಪಡೆಯ ವಶಕ್ಕೆ ನೀಡಲಾಗಿದ್ದು ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.