ನವದೆಹಲಿ, ಫೆ 27 (Daijiworld News/MB) : ಭಾನುವಾರದಿಂದ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 34 ಜನರು ಮೃತಪಟ್ಟಿದ್ದು ಆ ಪೈಕಿ 14 ಜನರ ಪಟ್ಟಿಯನ್ನು ಆಸ್ಪತ್ರೆಯು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
34 ಜನ ಮೃತರನ್ನು ಹೊರತುಪಡಿಸಿ ಈವರೆಗೆ 100 ಕ್ಕೂ ಅಧಿಕ ಮಂದಿಗೆ ಗುಂಡೇಟಿನಿಂದ, ಕಲ್ಲು ತೂರಾಟದಿಂದ, ಹರಿತವಾದ ಆಯುಧಗಳಿಂದ ಹಾಗೂ ಕಟ್ಟಡದಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.
ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟವರು
1. ಬಿಹಾರ ಮೂಲದ ಬಾಬರ್ ಪುರ ನಿವಾಸಿ ಕೂಲಿ ಕಾರ್ಮಿಕ ಮುಭಾರಕ್ ಹುಸೈನ್ (28) ಎಂಬಾತ ವಿಜಯ ಪಾರ್ಕ್ ಬಳಿ ಎದೆಗೆ ಗುಂಡು ಬಿದ್ದ ಪರಿಣಾಮ ಮೃತಪಟ್ಟಿದ್ದಾರೆ.
2. ಆಟೋ ಚಾಲಕ ಶಾಹಿದ್ ಖಾನ್ ಆಲ್ವಿ (22) ಬಾಜನ್ಪುರ ದರ್ಗಾದ ಬಳಿ ಗುಂಡೇಟಿಗೆ ಬಲಿಯಾಗಿದ್ದಾರೆ.
3. ಖಾರ್ದಂಪುರ್ ನಿವಾಸಿ ಆಟೋ ಚಾಲಕ ಮುದಾಸಿರ್ ಖಾನ್ ಕೂಡಾ ಗುಂಡೇಟಿಗೆ ಬಲಿಯಾಗಿದ್ದಾರೆ.
4. ನಝೀಮ್ ಖಾನ್ (35) ಗುಜರಿ ವ್ಯಾಪಾರಿ ಕೂಡಾ ಗುಂಡೇಟಿಗೆ ಮೃತಪಟ್ಟಿದ್ದಾರೆ.
5. ಮೊಹಮ್ಮದ್ ಫರ್ಕ್ವಾನ್ (30) ಜಾಫ್ರಾಬಾದ್ನ ಭಜನ್ಪುರ ಪ್ರದೇಶದಲ್ಲಿ ಆಹಾರ ಖರೀದಿಸಲು ಹೊರಟಾಗ ಗುಂಡು ಹಾರಿಸಲಾಗಿದೆ.
6. ಬ್ರಿಜ್ಪುರಿ ನಿವಾಸಿ ಮೆಹ್ತಾಬ್ (22) ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.
7. ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ (42) ಗೋಕುಲ್ಪುರಿಯಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
8. ಶಿವ ವಿಹಾರದ ಬಾಬು ನಗರದ ನಿವಾಸಿ ಹಾಗೂ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದ ರಾಹುಲ್ ಸೋಲಂಕಿ ಅವರು ಹಾಲು ಖರೀದಿಸಲು ಹೊರಟ್ಟಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಗೆ ಗುಂಡು ಹಾರಿಸಲಾಗಿದೆ.
9. ಗುಪ್ತಚರ ಇಲಾಖೆಯ ಭದ್ರತಾ ಸಹಾಯಕ ಖಜುರಿ ಖಾಸ್ ನಿವಾಸಿ ಅಂಕಿತ್ ಶರ್ಮಾ (26) ಅವರ ಶವ ಚಾಂದ್ಬಾಗ್ ಚರಂಡಿಯಲ್ಲಿ ಪತ್ತೆಯಾಗಿದ್ದು ಅವರನ್ನು ಕೂಡಾ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ.
10. ವಿನೋದ್ ಕುಮಾರ್ (45) ಮನೆಗೆ ಹಿಂದಿರುಗುವಾಗ ಬ್ರಹ್ಮಪುರಿಯಲ್ಲಿ ಅವರನ್ನು ಥಳಿಸಲಾಗಿತ್ತು
11. ವೀರ್ ಭನ್ ಸಿಂಗ್ (48) ಊಟ ಮಾಡಲೆಂದು ಹೊರಟ್ಟಿದ್ದ ಸಂದರ್ಭದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
12. ಅಸ್ತಫಕ್ ಹುಸೇನ್ (24) ಮುಸ್ತಾಬಾದ್ನಲ್ಲಿ ಐದು ಬಾರಿ ಗುಂಡು ಹಾರಿಸಲಾಗಿದೆ.
13. ಮಂಡೋಲಿಯ ದೀಪಕ್ (34) ಮಾರಾಕಾಯುಧಗಳಿಂದ ಇರಿದು ಸಾಯಿಸಲಾಗಿದೆ.
14. ಕಬೀರ್ ನಗರದಲ್ಲಿ ವಾಸಿಸುವ ಇಶಾಕ್ ಖಾನ್ (24) ಗುಂಡು ಹಾರಿಸಲಾಗಿದೆ.
15. ಲೋನಿ ಮೂಲದ ಶಾನ್ ಮೊಹಮ್ಮದ್ (34) ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
16. ಮೌಜ್ಪುರ ನಿವಾಸಿ ಪ್ರವೇಶ್ (48) ಗುಂಡೇನಿಂದಾಗಿ ಮೃತಪಟ್ಟಿದ್ದಾರೆ.
17. ಮುಸ್ತಾಬಾದ್ ನಿವಾಸಿ ಜಾಕೀರ್ (24) ಮಾರಾಕಾಸ್ತ್ರಗಳ ಇರಿತದಿಂದಾಗಿ ಮೃತಪಟ್ಟಿದ್ದಾರೆ.
18. ದಿಲ್ಬಾರ್ ಎಂಬವರು ಅವರನ್ನು ಸುಟ್ಟು ಹತ್ಯೆ ಮಾಡಲಾಗಿದ್ದು ಅವರ ವಯಸ್ಸು ಹಾಗೂ ವಾಸ ಸ್ಥಳ ತಿಳಿದು ಬಂದಿಲ್ಲ.
19. ಬ್ರಿಜ್ಪುರಿಯ ನಿವಾಸಿ ರಾಹುಲ್ ಠಾಕೂರ್ (23) ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ಆಸ್ಪತ್ರೆ ತಿಳಿಸಿರುವುದಾಗಿ ವರದಿಯಾಗಿದೆ.