ನವದೆಹಲಿ, ಫೆ 28 (Daijiworld News/MB) : ಹಿರಿಯ ಐಪಿಎಸ್ ಅಧಿಕಾರಿ ಎಸ್ಎನ್ ಶ್ರೀವಾಸ್ತವ ಅವರನ್ನು ದೆಹಲಿ ಪೊಲೀಸ್ ಆಯುಕ್ತರನ್ನಾಗಿ ಕೇಂದ್ರ ಗೃಹ ಸಚಿವಾಲಯ ನೇಮಕ ಮಾಡಿದೆ.
ದೆಹಲಿಯಲ್ಲಿ ವಿವಾದಾತ್ಮಕ ಪೌರತ್ವ ಕಾನೂನಿಗೆ ಸಂಬಂಧಿಸಿ ಉಂಟಾದ ಹಿಂಸಾಚಾರವನ್ನು ನಿಯಂತ್ರಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ಯಿಂದ ಶ್ರೀವಾಸ್ತವರನ್ನು ದೆಹಲಿಗೆ ಕರೆಸಿಕೊಂಡಿದ್ದ ಗೃಹ ಸಚಿವಾಲಯ ಅವರನ್ನು ವಿಶೇಷ ಆಯುಕ್ತ (ಕಾನೂನು ಹಾಗೂ ಸುವ್ಯವಸ್ಥೆ) ರನ್ನಾಗಿ ನೇಮಿಸಿತ್ತು.
ದೆಹಲಿ ಪೊಲೀಸ್ ಆಯುಕ್ತರಾಗಿರುವ ಅಮೂಲ್ಯ ಪಟ್ನಾಯಕ್ ಅವರು ಶನಿವಾರ ನಿವೃತ್ತಿಯಾಗಲಿದ್ದು ಮುಂದಿನ ದೆಹಲಿ ಪೊಲೀಸ್ ಆಯುಕ್ತರಾಗಿ ಶ್ರೀವಾಸ್ತವ ನೇಮಕವಾಗಿದ್ದಾರೆ.