ಹೈದರಾಬಾದ್, ಫೆ 28 (Daijiworld News/MB) : ವಾಟ್ಸ್ಆಪ್, ಟ್ವಿಟ್ಟರ್ ಮತ್ತು ಟಿಕ್ಟಾಕ್ ದೇಶದ್ರೋಹಿ ಚಟುವಟಿಕೆಗಳಿಗೆ ವೇದಿಕೆ ನೀಡುತ್ತಿದೆ ಎಂದು ಆರೋಪಿಸಿ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಇಲ್ಲಿನ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸೈಬರ್ ಅಪರಾಧ ದಳದ ಪೊಲೀಸರು ವಾಟ್ಸ್ಆಪ್, ಟ್ವಿಟ್ಟರ್ ಮತ್ತು ಟಿಕ್ಟಾಕ್ ವಿರುದ್ಧ ಶ್ರೀಶಾಲಿಮಾ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಡಿಸಿಪಿ ರಘುವೀರ್ ಅವರು, "ಈ ದೂರಿನಲ್ಲಿ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಟ್ವಿಟ್ಟರ್ ಮತ್ತು ಟಿಕ್ ಟಾಟ್ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಹೇಳಿಕೆಯನ್ನು ಉಲ್ಲೇಖಿಸಲಾಗಿತ್ತು" ಎಂದು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ನಡೆಯುತ್ತಿರುವ ಹಿಂಸಾಚಾರಕ್ಕೆ ಈ ಸಾಮಾಜಿಕ ಜಾಲತಾಣಗಳು ವೇದಿಕೆ ಒದಗಿಸುತ್ತದೆ ಎಂದು ಅವರು ಆರೋಪಿಸಿ ಇದು ರಾಷ್ಟ್ರೀಯ ಭಾವೈಕ್ಯತೆಗೆ ಮಾರಕವಾಗಿದೆ ಎಂದು ಅವರು ಹೇಳಿದ್ದಾರೆ.
ಐಟಿ ಕಾಯ್ದೆಯ ಅಡಿಯಲ್ಲಿ ವಾಟ್ಸ್ಆಪ್, ಟ್ವಿಟ್ಟರ್ ಮತ್ತು ಟಿಕ್ಟಾಕ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೈದರಾಬಾದ್ ಸೈಬರ್ ಅಪರಾಧ ದಳದ ಡಿಸಿಪಿ ರಘುವೀರ್ ಹೇಳಿದ್ದಾರೆ.