ನವದೆಹಲಿ, ಫೆ 28 (Daijiworld News/MB) : ಈಶಾನ್ಯ ದೆಹಲಿಯ ಮಂಗಳವಾರ ನಡೆದ ಹಿಂಸಾಚಾರದಿಂದ ಆ ದಿನ ನಡೆಯಬೇಕಿದ್ದ 23 ವರ್ಷದ ಸಾವಿತ್ರಿ ಪ್ರಸಾದ್ ವಿವಾಹವನ್ನು ಅನಿವಾರ್ಯವಾಗಿ ರದ್ದುಪಡಿಸಬೇಕಾಯಿತು. ತನ್ನ ಮನೆಯ ಹೊರಗೆಯೇ ನಡೆಯುತ್ತಿದ್ದ ಹಿಂಸಾಚಾರ ಘಟನೆಗಳಿಂದ ಕಂಗಾಲಾಗಿದ್ದ ಸಾವಿತ್ರಿ ಕಣ್ಣೀರು ಹರಿಸಿದ್ದು ಆಕೆಯ ನೆರೆಹೊರೆಯ ಮುಸ್ಲಿಮರು ತಾವಿದ್ದೇವೆ ಎಂದು ಧೈರ್ಯ ತುಂಬಿದ ಕಾರಣ ಆಕೆಯ ತಂದೆ ವಿವಾಹವನ್ನು ಮರುದಿನಕ್ಕೆ ನಿಗದಿಪಡಿಸಿದ್ದರು.
"ಇಂದು ನನ್ನ ಮುಸ್ಲಿಂ ಸೋದರರು ನನಗೆ ರಕ್ಷಣೆ ನೀಡಿದ್ದಾರೆ" ಎಂದು ವಧು ವರದಿಗಾರರಲ್ಲಿ ಹೇಳಿದ್ದಾಳೆ.
ಚಾಂದ್ಬಾಗ್ ಜಿಲ್ಲೆಯ ಸಣ್ಣ ಗಲ್ಲಿಯಲ್ಲಿರುವ ಪುಟ್ಟ ಮನೆಯಲ್ಲಿ ಆಕೆಯ ವಿವಾಹ ನಡೆದಿದ್ದು ಆ ಸಂದರ್ಭದಲ್ಲೇ ಹತ್ತಿರದ ಮೂಕ್ಯ ರಸ್ತೆಯಲ್ಲಿ ಗಲಭೆ ನಡೆಯುತ್ತಿತ್ತು.
ಆದರೆ ಹಿಂದೂ ಮುಸ್ಲಿಮರು ಸೇರಿ ಸಾವಿತ್ರಿ ವಿವಾಹವನ್ನು ನಡೆಸಿದ್ದಾರೆ.
ನನ್ನ ಪುತ್ರಿಯ ವಿವಾಹಕ್ಕೆ ನಮ್ಮ ಸಂಬಂಧಿಕರು ಯಾರೂ ಕೂಡಾ ಬಂದಿಲ್ಲ. ಆದರೆ ನಮ್ಮ ನೆರೆಹೊರೆಯ ಮುಸ್ಲಿಮರು ನಮ್ಮ ಜೊತೆಗಿದ್ದರು. ಅವರೇ ನಮ್ಮ ಕುಟುಂಬ ಎಂದು ಸಾವಿತ್ರಿ ತಂದೆ ಭೋದೆ ಪ್ರಸಾದ್ ಹೇಳಿದ್ದಾರೆ.