ಮಧ್ಯಪ್ರದೇಶ, ಫೆ.29 (DaijiworldNews/PY) : ಬಾಲಕಿಯು ಫೋನ್ ಮೂಲಕ ಹುಡುಗನೊಂದಿಗೆ ಮಾತನಾಡುತ್ತಿದ್ದಾಳೆ ಎನ್ನುವ ಕಾರಣಕ್ಕಾಗಿ ಕುಟುಂಬದವರೇ ನಡುರಸ್ತೆಯಲ್ಲೇ ಬಾಲಕಿಯ ಜಡೆಯನ್ನು ಕತ್ತರಿಸಿದ ಘಟನೆ ಮಧ್ಯಪ್ರದೇಶದ ಅಲಿರಾಜ್ಪುರ ಪ್ರದೇಶದ ಸೊಂಡ್ವಾ ಎಂಬಲ್ಲಿ ನಡೆದಿದೆ.
ಬಾಲಕಿ ಅಪ್ರಾಪ್ತಳಾಗಿದ್ದು, ಆಕೆ ತನ್ನ ಪರಿಚಯವಾದ ಹುಡುಗನೊಬ್ಬನ ಜೊತೆ ಫೋನ್ನಲ್ಲಿ ಮಾತನಾಡಿದಳು ಎನ್ನಲಾಗಿದೆ.
ಈ ಕಾರಣದಿಂದಾಗಿ ಆಕೆಯ ಜಡೆಯನ್ನು, ಆಕೆಯ ಕುಟುಂಬದ ನಾಲ್ಕು ಮಂದಿ ನಡುರಸ್ತೆಯಲ್ಲಿ ಕತ್ತರಿಸಿ ಹಾಕಿದ್ದಾರೆ. ಊರ ಜನರೆಲ್ಲಾ ಈ ಘಟನೆಯನ್ನು ನೋಡುತ್ತಿದ್ದರೂ ಯಾರೊಬ್ಬರೂ ಇದನ್ನು ತಡೆಯಲು ಧಾವಿಸಲಿಲ್ಲ.
ವ್ಯಕ್ತಿಯೊಬ್ಬ ಈ ಘಟನೆಯನ್ನು ಚಿತ್ರಿಕರಿಸಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ಸ್ಡಿಪಿ ಧೀರಜ್ ಬಬ್ಬರ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.