ಶಿಲ್ಲಾಂಗ್, ಫೆ.29 (DaijiworldNews/PY) : ಸಿಎಎ ಪರ-ವಿರೋಧಿ ಗುಂಪುಗಳ ನಡುವೆ ಮೇಘಾಲಯದ ಪೂರ್ವ ಖಾಶಿ ಪರ್ವತ ಪ್ರದೇಶದಲ್ಲಿ ಭುಗಿಲೆದ್ದ ಸಂಘರ್ಷದಲ್ಲಿ ಇಬ್ಬರ ಹತ್ಯೆಯಾಗಿದ್ದು, ಹಲವರಿಗೆ ಗಾಯಗಳಾಗಿವೆ.
ಖಾಶಿ ವಿದ್ಯಾರ್ಥಿ ಸಂಘಟನೆ ಹಾಗೂ ಬುಡಕಟ್ಟು ಜನಾಂಗಕ್ಕೆ ಸೇರಿದ ಜನರ ಗುಂಪುಗಳ ಮಧ್ಯೆ ಸಂಘರ್ಷ ನಡೆದಿದೆ.
ಸಂಘರ್ಷದಲ್ಲಿ ಖಾಶಿ ವಿದ್ಯಾರ್ಥಿ ಸಂಘಟನೆಯ ಸದಸ್ಯ ಸೇರಿದಂತೆ ಇನ್ನೊಬ್ಬ ಯುವಕ ಚಾಕು ಇರಿತದಿಂದ ಮೃತಪಟ್ಟಿದ್ದಾರೆ.
ಮೇಘಾಲಯದ ರಾಜಧಾನಿಯಾದ ಶಿಲ್ಲಾಂಗ್ನಿಂದ 90 ಕಿ.ಮೀ ದೂರವಿರುವ ಖಾಶಿ ಪರ್ವತ ಪ್ರದೇಶದಲ್ಲಿ ಬಿಗುವಿನ ವಾತಾವರಣವಿದ್ದು, ರಾಜ್ಯ ಸರ್ಕಾರ ಶಾಂತಿ ಕಾಪಾಡಲು ಜನರಿಗೆ ಮನವಿ ಮಾಡಿದೆ.
ರಾಜ್ಯದ ಸೂಕ್ಷ್ಮ ಪ್ರದೇಶಗಳು ಹಾಗೂ ಶಿಲ್ಲಾಂಗ್ ಸೇರಿದಂತೆ ಕರ್ಫ್ಯೂ ಜಾರಿ ಮಾಡಲಾಗಿದ್ದು, 6 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿದೆ.