ಸಿಲ್ಚಾರ್, ಫೆ.29 (DaijiworldNews/PY) : ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ದ ಫೇಸ್ಬುಕ್ನಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಹಾಕಿದ್ದ ಅಸ್ಸಾಂನ ಸಿಲ್ಚಾರ್ ಕಾಲೇಜಿನ ಅತಿಥಿ ಉಪನ್ಯಾಸಕ ಸೌರವ್ದೀಪ್ ಸೇನ್ಗುಪ್ತಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಸೌರವ್ದೀಪ್ ಸೇನ್ಗುಪ್ತಾ ಅವರು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರನ್ನು, ವಿದ್ಯಾರ್ಥಿಯೊಬ್ಬ ನೀಡಿದ ದೂರನ್ನು ಆಧರಿಸಿ ಫೆ.28 ಶುಕ್ರವಾರದಂದು ರಾತ್ರಿ ಬಂಧಿಸಲಾಗಿದೆ.
ತಮ್ಮ ಫೇಸ್ಬುಕ್ ಪೋಸ್ಟ್ಗಳಲ್ಲಿ ಸೌರವ್ದೀಪ್ ಅವರು ಸಮುದಾಯವೊಂದನ್ನು ಗುರಿಯಾಗಿಸಿದ್ದರು ಎಂಬ ಆರೋಪವೂ ಇದೆ. ಕಾಲೇಜಿನ ವಿದ್ಯಾರ್ಥಿಗಳು ಅವರನ್ನು ಸೇವೆಯಿಂದ ತೆಗೆಯಲು ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದಕ್ಕಾಗಿ ಹಲವು ಬಾರಿ ಕ್ಷಮೆಯಾಚಿಸಿರುವುದಾಗಿ ಆತನ ಕುಟುಂಬದವರು ತಿಳಿಸಿದರು.