ಬೆಂಗಳೂರು, ಮಾ.01 (DaijiworldNews/PY) : ಈಶ್ವರಪ್ಪ ಅವರು ದೇವೇಗೌಡರ ಮಟ್ಟಕ್ಕೆ ಬೆಳೆಯುವುದು ಅಸಾಧ್ಯ. ಎಚ್ಡಿಡಿ ಅವರ ಹೆಸರನ್ನು ಪ್ರಚಾರಕ್ಕೋಸ್ಕರ ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಅವರಿಗೆ ಜೆಡಿಎಸ್ ಕಾರ್ಯಕರ್ತರನ್ನು ಹುಡುಕುವ ಕೆಲಸ ಬೇಡ ಎಂದು ಈಶ್ವರಪ್ಪ ಅವರಿಗೆ ಜೆಡಿಎಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಮಂಡ್ಯದಲ್ಲಿ ಜೆಡಿಎಸ್ ಮುಖಂಡನ ಕಲ್ಲು ಕ್ವಾರೆಗೆ ತಡೆ ನೀಡಿತ್ತು. ಈ ಬಗ್ಗೆ ಸಿಟ್ಟಾದ ದೇವೆಗೌಡರು, ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ನಾವು ಸುಮ್ಮನಿರುವುದಿಲ್ಲ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ದೇವೇಗೌಡ ಅವರು ತಾವೂ ಸೋತು, ಮೊಮ್ಮಗನನ್ನೂ ಸೋಲಿಸಿದರು. ರಾಜ್ಯದಲ್ಲಿ ಈಗ ಜೆಡಿಎಸ್ ಪಕ್ಷ ಎಲ್ಲಿದೆ? ಕಾರ್ಯಕರ್ತರನ್ನು ನಾವು ಹುಡಕಬೇಕಿದೆ ಎಂದು ಹೇಳಿದ್ದರು.
ಜೆಡಿಎಸ್ ಕಾರ್ಯಕರ್ತರು ಈಗ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಲದೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬ್ರಿಗೇಡ್ ರಾಜ್ಯಾಧ್ಯಕ್ಷ ವಿ. ಶಶಿಗೌಡ ಅವರು ಸಚಿವರ ಮೊಬೈಲ್ಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಶಶಿಗೌಡ ಅವರು ಕರೆ ಮಾಡಿದ ಸಂದರ್ಭ ಈಶ್ವರಪ್ಪ ಆಪ್ತ ಸಹಾಯಕ ಕರೆ ಸ್ವೀಕರಿಸಿದ್ದು, ಶಶಿಗೌಡ ಎಷ್ಟೇ ಕೇಳಿಕೊಂಡರೂ ಈಶ್ವರಪ್ಪ ಆಪ್ತ ಸಹಾಯಕ ಈಶ್ವರಪ್ಪ ಅವರಿಗೆ ಪೋನ್ ನೀಡಲಿಲ್ಲ. ಈ ಸಂದರ್ಭ ಅವರು ಸಚಿವರ ಆಪ್ತ ಸಹಾಯಕರಿಗೆ ಎಚ್ಚರಿಕೆ ನೀಡಿ, ಈಶ್ವರಪ್ಪ ಅವರು ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆ ಎಂದು ಕೇಳುತ್ತಾರೆ. ಹಾಗಾಗಿ ಅವರನ್ನು ಒಮ್ಮೆ ಭೇಟಿ ಮಾಡಬೇಕು. ಈ ಮುಖಾಂತರ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಿತ್ತು ಎಂದು ಹೇಳಿದ್ಧಾರೆ.
ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಶಿಗೌಡ, ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿಸಿದವರು. ಈಶ್ವರಪ್ಪ ಅವರು ದೇವೇಗೌಡರ ಮಟ್ಟಕ್ಕೆ ಬೆಳೆಯುವುದು ಅಸಾಧ್ಯ. ಎಚ್ಡಿಡಿ ಅವರ ಹೆಸರನ್ನು ಪ್ರಚಾರಕ್ಕೋಸ್ಕರ ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಅವರಿಗೆ ಜೆಡಿಎಸ್ ಕಾರ್ಯಕರ್ತರನ್ನು ಹುಡುಕುವ ಕೆಲಸ ಬೇಡ ಎಂದಿದ್ಧಾರೆ.