ನವದೆಹಲಿ, ಮಾ.01 (DaijiworldNews/PY) : ಕೊರೋನಾ ವೈರಸ್ ಸೋಂಕು ಇರಾನ್ನಲ್ಲಿ ವ್ಯಾಪಕವಾದ ಹಿನ್ನೆಲೆ ಸ್ವದೇಶಕ್ಕೆ ಮರಳಲು ಇಚ್ಚಿಸುವ ಭಾರತೀಯರಿಗೆ ಅಧಿಕಾರಿಗಳು ನೆರವು ನೀಡಲಿದ್ದಾರೆ ಎಂದು ಇರಾನ್ನ ಭಾರತೀಯ ರಾಯಭಾರಿ ಗದ್ದಮ್ ಧರ್ಮೇಂದ್ರ ಫೆ.29 ಶನಿವಾರ ತಿಳಿಸಿದ್ದಾರೆ.
ಈ ವ್ಯವಸ್ಥೆ ಏರ್ಪಡಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇರಾನ್ನಲ್ಲಿ ಮಹಾಮಾರಿ ಕೊರೋನಾ ವೈರಸ್ಗೆ ಸುಮಾರು 43 ಜನರು ಸಾವನ್ನಪ್ಪಿದ್ದಾರೆ.
ಮಾರಣಾಂತಿಕ ಕೊರೋನಾ ವೈರಸ್ ಭೀತಿಯಿಂದಾಗಿ ತವರಿಗೆ ಮರಳಲು ಇಚ್ಚಿಸುವ ಭಾರತೀಯರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಇದಕ್ಕೆ ವ್ಯವಸ್ಥೆ ಮಾಡಲು ಮಾತುಕತೆ ನಡೆಯುತ್ತಿವೆ ಎಂದು ಧರ್ಮೇಂದ್ರ ಅವರು ತಿಳಿಸಿದ್ದಾರೆ.