ಕೋಲ್ಕತ, ಮಾ.01 (DaijiworldNews/PY) : "ಭಾರತವು ಭಯೋತ್ಪಾದನೆ ಬಗ್ಗೆ ಸಹಿಷ್ಣುತೆ ಹೊಂದಿಲ್ಲ" ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೋಲ್ಕತದಲ್ಲಿ ಭಾನುವಾರ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಪೂರ್ವಭಾವಿ ರಕ್ಷಣಾ ನೀತಿಯನ್ನು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ದಿಪಡಿಸಲಾಗಿದೆ" ಎಂದು ತಿಳಿಸಿದರು.
"ಭಾರತವು ಈಗ ಸರ್ಜಿಕಲ್ ಸ್ಟ್ರೈಕ್ ನಡೆದ ಬಳಿಕ ಅಮೆರಿಕ ಹಾಗೂ ಇಸ್ರೇಲ್ನಂತಹ ದೇಶಗಳ ಸಾಲಿಗೆ ಸೇರಿದೆ" ಎಂದು ಹೇಳಿದರು.