ಶಿರಸಿ, ಮಾ 01 (DaijiworldNews/SM): ಬೆಂಗಳೂರಿನಲ್ಲಿ ನಡೆದ ರ್ಯಾಲಿ ಸಂದರ್ಭದಲ್ಲಿ ಪಾಕಿಸ್ತಾನ ಪರ ಜೈಕಾರ ಕೂಗಿದ ಅಮೂಲ್ಯಗೆ ದೇಶವೇ ದಿಕ್ಕಾರ ಕೂಗುತ್ತಿದೆ. ಇದೀಗ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕೂಡ ಈ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗುವವರ ವಿರುದ್ಧ ಸರಕಾರ ಸುಮ್ಮನಿರುವುದಿಲ್ಲ ಎಂದು ಗರಂ ಆಗಿ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತಕ್ಕೆ ವಿರೋಧದ ಜಯಕಾರ ಕೂಗಿದವರನ್ನು ಎಂದಿಗೂ ಸಹಿಸಲು ಅಸಾಧ್ಯ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರಕಾರ ಬದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತಾಂಬೆಯ ಮಡಿಲಲ್ಲಿದ್ದುಕೊಂಡು ಇಲ್ಲಿನ ಗಾಳಿ-ನೀರನ್ನು ಸೇವಿಸಿಕೊಂಡು ಭಾರತದ ವಿರುದ್ಧ ಮಾತನಾಡಿದರೆ ಜೈಲಿಗೆ ಕಳಿಸುತ್ತೇವೆ ಎಂದು ಗರಂ ಆಗಿ ನುಡಿದಿದ್ದಾರೆ. ದೊರೆಸ್ವಾಮಿ ಹಾಗೂ ಯತ್ನಾಳರ ಮಾತುಗಳನ್ನು ಕೇಳಿದ್ದೇವೆ. ಈ ಗೊಂದಲ ಇತ್ಯರ್ಥ ಆಗಬಹುದೆಂಬ ನಂಬಿಕೆ ಇದೆ ಎಂದರು.