ಮಥುರಾ, ಮಾ. 02 (Daijiworld News/MB) : "ಕೇಂದ್ರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಳಿಕ ಜನಸಂಖ್ಯಾ ನಿಯಂತ್ರಣಾ ಕಾಯ್ದೆ ಜಾರಿಗೆ ತರುವ ಸಾಧ್ಯತೆಯಿದೆ" ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಹೇಳಿದ್ದಾರೆ.
ಮಥುರಾದ ಚೈತನ್ಯ ವಿಹಾರದಲ್ಲಿರುವ ವಾಮದೇವ ಜ್ಯೋತಿರ್ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, "ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ವಿಚಾರವಾಗಿ ಈಗಾಗಲೇ ಚರ್ಚೆ ನಡೆಸಿದ್ದೇನೆ" ಎಂದು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲು ಸಾಧ್ಯವೇ ಇಲ್ಲ , ಅದರಿಂದಾಗಿ ರಕ್ತಪಾತಕ್ಕೆ ಕಾರಣವಾಗುತ್ತದೆ ಎಂಬ ಆತಂಕ ಎಲ್ಲರಲ್ಲೂ ಇತ್ತು. ಆದರೆ ಸರ್ಕಾರ ಆ ವಿಶೇಷ ಸ್ಥಾನಮಾನವನ್ನೇ ರದ್ದು ಮಾಡಿ ತೋರಿಸಿದೆ. ಮೋದಿ ಸರ್ಕಾರ ದೇಶದ ಹಿತಕ್ಕಾಗಿ ಅಗತ್ಯವಾದ ಯಾವುದೇ ಕಾನೂನು ಜಾರಿಗೆ ತರಲು ಬದ್ಧ" ಎಂದು ಅವರು ಹೇಳಿದರು.