ಚೆನ್ನೈ, ಮಾ. 02 (Daijiworld News/MB) : ದೇಶದಲ್ಲಿ ಶಾಂತಿ ಕಾಪಾಡಲು ಯಾವ ಪಾತ್ರವನ್ನೂ ನಿರ್ವಹಿಸಲು ಸಿದ್ಧ ಎಂದು ಖ್ಯಾತ ನಟ ರಜನಿಕಾಂತ್ ಹೇಳಿದ್ದಾರೆ.
ಭಾನುವಾರ ಚೆನ್ನೈನ ನಿವಾಸದಲ್ಲಿ "ತಮಿಳ್ ನಾಡು ಜಾಮಾ ಉಯಮಾ ಸಬಾಯ್" ಮುಸ್ಲಿಂ ಸಂಘಟನೆ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ರಜನಿಕಾಂತ್ ಹೇಳಿದ್ದಾರೆ.
ನಾನು ದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಪಾತ್ರ ನಿರ್ವಹಣೆ ಮಾಡಲು ಸಿದ್ಧ. ನಾನು ನನ್ನನ್ನು ಭೇಟಿಯಾದ ಮುಸ್ಲಿಂ ನಾಯಕರ ಅಭಿಪ್ರಾಯವನ್ನು ಒಪ್ಪುತ್ತೇನೆ. ಪ್ರೀತಿ, ಏಕತೆ ಮತ್ತು ಶಾಂತಿ ದೇಶದ ಪ್ರಧಾನ ಉದ್ದೇಶವಾಗಿರಬೇಕು" ಎಂದು ಅವರು ತಿಳಿಸಿದ್ದಾರೆ.
ಕಳೆದ ವಾರ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಜನಿಕಾಂತ್ ಅವರು "ಹಿಂಸಾಚಾರವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ತೆರಳಿ" ಎಂದು ಕೇಂದ್ರ ಸರ್ಕಾರದ ನಾಯಕರ ಕುರಿತಾಗಿ ಹೇಳಿದರು.