ನವದೆಹಲಿ, ಮಾ.02 (DaijiworldNews/PY) : ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧ ಪ್ರಾರಂಭವಾಗಲಿದ್ದು, ಚರ್ಚೆಯ ಪ್ರಧಾನ ವಿಷಯವಾಗಿ ದೆಹಲಿ ಹಿಂಸಾಚಾರವನ್ನಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಲು ವಿಪಕ್ಷ ಕಾಂಗ್ರೆಸ್ ತಯಾರಿ ನಡೆಸಿದೆ.
ಸಂಸತ್ನ ಎರಡೂ ಸದನಗಳಲ್ಲೂ ದೆಹಲಿ ಗಲಭೆಯ ವಿಚಾರವಾಗಿ ಚರ್ಚೆಗೆ ಅವಕಾಶ ನೀಡುವಂತೆ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಸರಕಾರವು ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಪೊಲೀಸರ ಹಾಗೂ ಗಲಭೆಕೋರರ ಒಂದು ವರ್ಗದ ಮಧ್ಯೆ ನಂಟಿರುವ ವಿಚಾರದ ಬಗ್ಗೆ ಸಂಶಯಗಳಿವೆ ಎಂದು ಹೇಳಿದ್ದಾರೆ.