ಅಹ್ಮದಾಬಾದ್, ಮಾ. 02 (Daijiworld News/MB) : ಗುಜರಾತ್ ರೈಲ್ವೆ ಪೊಲೀಸರು ಪ್ರಯಾಣಿಕರ ಸುರಕ್ಷತೆಗಾಗಿ ಪರಿಚಯಿಸಿರುವ ಮೊಬೈಲ್ ಆಪ್ನಲ್ಲಿ "ಪ್ರಮಾದವಶಾತ್" ಪಾಕಿಸ್ತಾನದ ರೈಲಿನ ಫೋಟೋವನ್ನು ಹಾಕಲಾಗಿದ್ದು, ಇದರಿಂದಾಗಿ ರೈಲ್ವೇ ಪೊಲೀಸರು ಮುಜುಗರಕ್ಕೆ ಒಳಗಾಗಿದ್ದಾರೆ.
ಶನಿವಾರ "ಸುರಕ್ಷಿತ ಸಫರ್" ಆಪ್ನ್ನು ಅನಾವರಣ ಮಾಡಲಾಗಿದ್ದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಸಿರು ಬಣ್ಣದ ರೈಲ್ವೇ ಇಂಜಿನ್ ಪಾಕಿಸ್ತಾನದ ರೈಲು ಎಂದು ಗುರುತಿಸಿದ್ದಾರೆ.
ತಪ್ಪಾಗಿ ಪಾಕಿಸ್ತಾನದ ಪೋಟೋ ಹಾಕಲಾಗಿರುವುದನ್ನು ಗಮನಿಸಿದ ಗುಜರಾತ್ ರೈಲ್ವೆ ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ರೈಲಿನ ಚಿತ್ರವನ್ನು ಆ್ಯಪ್ನಿಂದ ತೆಗೆದುಹಾಕಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪ್ಲಿಕೇಶನ್ನ್ನು ಆಕರ್ಷಿತಗೊಳಿಸುವ ನಿಟ್ಟಿನಲ್ಲಿ ಆಪ್ ಡೆವಲಪರ್ ರೈಲಿನ ಕೆಲವು ಫೋಟೋಗಳನ್ನು ಹಾಕಿದ್ದರು. ಈ ಸಂದರ್ಭದಲ್ಲಿ ಪ್ರಮಾದವಶಾತ್ ಪಾಕಿಸ್ತಾನಿ ರೈಲಿನ ಪೋಟೋವನ್ನು ಹಾಕಿದ್ದಾರೆ. ಇದು ತಿಳಿದ ಕೂಡಲೇ ಆ ಪೋಟೋವನ್ನು ತೆಗೆದು ಹಾಕುವಂತೆ ಆಪ್ ಡೆವಲಪರ್ಗೆ ನಾವು ತಿಳಿಸಿದ್ದೇವೆ. ಇದೊಂದು ಉದ್ದೇಶಪೂರ್ವಕ ತಪ್ಪಾಗಿರಲಿಲ್ಲ" ಎಂದು ಪೊಲೀಸ್ ಅಧಿಕಾರಿ ಗೌರವ್ ಪಾರ್ಮರ್ ತಿಳಿಸಿದ್ದಾರೆ.
ಗುಜರಾತ್ನ ಗೃಹ ಸಚಿವ ಪ್ರದೀಪ್ ಸಿನ್ಹಾ ಅವರು ಫೆ. 29 ರಂದು ರೈಲ್ವೇ ಆಪ್ನ್ನು ಗುಜರಾತ್ನ್ನು ಅನಾವರಣ ಮಾಡಿದ್ದಾರೆ.