ಕೊಚ್ಚಿ,ಮಾ 2 (Daijiworld News/MSP): ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲು ಸೇರಿರುವ ಕೇರಳದ ಪಾದ್ರಿಯೊಬ್ಬರನ್ನು ಚರ್ಚ್ ಕರ್ತವ್ಯದಿಂದ ಉಚ್ಚಾಟಿಸಲಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ಸೈರೊ ಮಲಬಾರ್ ಚರ್ಚ್ ನ ಪಾದ್ರಿ ರಾಬಿನ್ ವಡಕ್ಕುಮಚೆರಿ ಅವರನ್ನು ಪೋಪ್ ಫ್ರಾನ್ಸಿಸ್ ಎಲ್ಲಾ ಧಾರ್ಮಿಕ ಹುದ್ದೆಗಳಿಂದ ಉಚ್ಚಟಿಸಿ ಆದೇಶ ಹೊರಡಿಸಿದ್ದಾರೆ.
ಶೂನ್ಯ ಸಹಿಷ್ಣು ನೀತಿಗೆ ಬದ್ಧರಾಗಿರುವ ಪೋಪ್ ಫ್ರಾನ್ಸಿಸ್ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ. "ಕಳಂಕಿತರಿಗೆ ಚರ್ಚ್ ಧರ್ಮ ಪ್ರಸಾರಕ್ಕೆ ಅವಕಾಶವಿಲ್ಲ" ಎಂದು ಹೇಳಿ ಪೋಪ್ ಫ್ರಾನ್ಸಿಸ್ ಉಚ್ಚಾಟಿಸಿದ್ದಾರೆ. ಪಾದ್ರಿಗೆ ವಹಿಸಲಾಗಿದ್ದ ಎಲ್ಲ ಅಧಿಕಾರಗಳನ್ನು ಹಿಂಪಡೆಯಲಾಗಿದೆ. ಉಚ್ಚಾಟನೆ ಹಿನ್ನಲೆಯಲ್ಲಿ ಇನ್ನು ಸಾಮಾನ್ಯ ವ್ಯಕ್ತಿಯಂತೆ ಬದುಕಬೇಕಾಗುತ್ತದೆ’ ಎಂದು ಚರ್ಚಿನ ಅಧಿಕಾರಿಗಳು ಹೇಳಿದ್ದಾರೆ.
ಸೈರೊ ಮಲಬಾರ್ ಚರ್ಚಿನ ಪಾದ್ರಿ ರಾಬಿನ್ ವಡಕ್ಕುಮಚೆರಿ ವಿರುದ್ಧ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 2017ರಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಳೆದ ವರ್ಷ ಪೋಕ್ಸೊನ್ಯಾಯಾಲಯ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 3ಲಕ್ಷ ದಂಡ ವಿಧಿಸಿತ್ತು