ಕೋಲ್ಕತ್ತ, ಮಾ.02 (DaijiworldNews/PY) : "ಕೋಲ್ಕತಾ ಬೀದಿಗಳಲ್ಲಿ ಗೋಲಿ ಮಾರೊ ಘೋಷಣೆ ಕೂಗಿರುವುದನ್ನ ನಾನು ಖಂಡಿಸುತ್ತೇನೆ. ಇದು ಬಂಗಾಳವೇ ಹೊರತು ದೆಹಲಿಯಲ್ಲ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸೋಮವಾರ ಈ ವಿಚಾರವಾಗಿ ಮಾತನಾಡಿದ ಅವರು, "ಇಲ್ಲಿನ ಕಾನೂನು ತನ್ನದೇ ಆದ ಕರ್ತವ್ಯ ನಿರ್ವಹಿಸಲಿದೆ. ಕೋಲ್ಕತ್ತ ಬೀದಿಗಳಲ್ಲಿ ಗೋಲಿ ಮಾರೋ ಘೋಷಣೆ ಕೂಗಿರುವುದನ್ನು ನಾನು ಖಂಡಿಸುತ್ತೇನೆ. ಇದನ್ನು ನಾನು ಸಹಿಸುವುದಿಲ್ಲ. ಇದು ಬಂಗಾಳವೇ ಹೊರತು ದೆಹಲಿಯಲ್ಲ" ಎಂದರು.
ಈ ಸಂದರ್ಭ ದೆಹಲಿ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು, "ಈಶಾನ್ಯ ದೆಹಲಿಯಲ್ಲಿ ಕಳೆದ ವಾರ ನಡೆದ ಹಿಂಸಾಚಾರವನ್ನು ನರಮೇಧ" ಎಂದು ಹೇಳಿದ್ದಾರೆ.
ಕೋಲ್ಕತ್ತದಲ್ಲಿ ಮಾ.1 ಭಾನುವಾರದಂದು ಗೋಲಿ ಮಾರೋ ಘೋಷಣೆ ಕೂಗಿದ ಆರೋಪದ ಹಿನ್ನೆಲೆ ಮೂವರನ್ನು ಬಂಧಿಸಲಾಗಿದೆ.
ಕಳೆದ ವಾರ ಈಶಾನ್ಯ ದೆಹಲಿಯ ಜಾಫ್ರಾಬಾದ್, ಶಿವ ವಿಹಾರ್, ಮುಸ್ತಾಬಾದ್ ಹಾಗೂ ಸೀಲಾಂಪುರಗಳಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಈವರೆಗೆ 46 ಮಂದಿ ಮೃತಪಟ್ಟಿದ್ದಾರೆ.