ನವದೆಹಲಿ, ಮಾ 2 (Daijiworld News/MSP): ನಿರ್ಭಯಾ ಹತ್ಯಾಚಾರ ಪ್ರಕರಣದಲ್ಲಿ ದೋಷಿಗಳೆಂದು ವಿಚಾರಣಾ ನ್ಯಾಯಾಲಯದಿಂದ ಘೋಷಿಸಲ್ಪಟ್ಟು ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಮಾರ್ಚ್ 3ರಂದು ದಿನಾಂಕ ನಿಗದಿಯಾಗಿತ್ತು. ಆದರೆ ಇದೀಗ ಗಲ್ಲು ಶಿಕ್ಷೆ ಜಾರಿಯಾಗುವ ಕುರಿತು ಇದೀಗ ಗೊಂದಲ ಉಂಟಾಗಿದೆ.
ನಿರ್ಭಯಾ ಅಪರಾಧಿಗಳಿಗೆ ಮಾರ್ಚ್ 3ರಂದು ಗಲ್ಲಿಗೇರಿಸುವಂತೆ ಹೊರಡಿಸಲಾಗಿರುವ ಡೆತ್ ವಾರಂಟ್ ಗೆ ತಡೆ ನೀಡಬೇಕು ಎಂದು ಅಪರಾಧಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯವು ಇಂದು ತಿರಸ್ಕರಿಸಿದೆ.
ಈ ನಡುವೆ ತಮ್ಮ ಕಕ್ಷೀದಾರ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಈ ಅರ್ಜಿಯ ಇತ್ಯರ್ಥವಾಗುವವರೆಗೂ ಗಲ್ಲು ಶಿಕ್ಷೆಜಾರಿ ಮುಂದೂಡುವಂತೆ ಅಪರಾಧಿ ಪವನ್ ಗುಪ್ತಾ ಪರ ವಕೀಲ ಎಪಿ ಸಿಂಗ್ ಮನವಿ ಮಾಡಿದ್ದಾರೆ. ಇದನ್ನು ಮಧ್ಯಾಹ್ನ 2 ಗಂಟೆಯ ಬಳಿಕ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ
ಒಟ್ಟಾರೆ ನಿರ್ಭಯಾ ಹತ್ಯಾಚಾರಿಗಳ ಗಲ್ಲುಶಿಕ್ಷೆ ಜಾರಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಪರಾಧಿಗಳು ದಿನಕ್ಕೊಂದು ಹೈಡ್ರಾಮಾ ಮಾಡುತ್ತಿದ್ದಾರೆ.