ಬೆಂಗಳೂರು, ಮಾ.02 (DaijiworldNews/PY) : ಕೇಂದ್ರ ಸರ್ಕಾರಕ್ಕೆ ದೇಶ ವಿರೋಧಿ ಘೋಷಣೆ ಕೂಗುವವರಿಗೆ ಕಂಡಲ್ಲಿ ಗುಂಡಿಕ್ಕುವ ಕಾನೂನು ರೂಪಿಸುವಂತೆ ಮನವಿ ಮಾಡುವುದಾಗಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ಕೆಲವು ಯುವಕರಿಗೆ ದೇಶ ವಿರೋಧಿ ಘೋಷಣೆ ಕೂಗುವುದು ಫ್ಯಾಷನ್ ಆಗಿಬಿಟ್ಟಿದೆ. ಪ್ರಚಾರದ ಸಲುವಾಗಿ ಈ ರೀತಿ ಮಾಡುತ್ತಾರೆ. ದೇಶವನ್ನು ಹಾಗೂ ದೇಶ ಪ್ರೇಮವನ್ನು ಇದು ಹಾಳು ಮಾಡುತ್ತದೆ" ಎಂದು ಸಚಿವರು ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.