ನವದೆಹಲಿ, ಮಾ. 02 (Daijiworld News/MB) : ರಾಷ್ಟ್ರಪತಿಗಳು ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾದ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕಾರ ಮಾಡಿದ್ದು ನಿರ್ಭಯಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಚಿತವಾಗಿದ್ದು, ಇದೀಗ ಮಾ.3ರಂದು ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದಿಲ್ಲ ಎಂದು ದೆಹಲಿ ಕೋರ್ಟ್ ತಿಳಿಸಿದೆ.
ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಫೆ.17ರಂದು ಹೊಸ ಡೆತ್ ವಾರಂಟ್ ಹೊರಡಿಸಿದ್ದು, ಅದರಂತೆ ಮಾರ್ಚ್ ಮೂರು (ಮಂಗಳವಾರ) ಗಲ್ಲು ಶಿಕ್ಷೆ ಆಗಬೇಕಿತ್ತು. ಆದರೆ, ಅಪರಾಧಿಗಳನ್ನು ನಾಳೆ ಗಲ್ಲಿಗೇರಿಸಲಾಗುವುದಿಲ್ಲ ಎಂದು ದೆಹಲಿ ಕೋರ್ಟ್ ತಿಳಿಸಿದೆ.
ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ಕೋರಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ರಾಷ್ಟ್ರಪತಿಯವರು ಕ್ಷಮಾದಾನ ಅರ್ಜಿಯನ್ನೂ ತಿರಸ್ಕಾರ ಮಾಡಿದ್ದಾರೆ.