ನವದೆಹಲಿ, ಮಾ 2 (Daijiworld News/MSP): ಪದೇ ಪದೇ ಒಂದಿಲ್ಲೊಂದು ಅರ್ಜಿಗಳ ಸಲ್ಲಿಸುವ ಮೂಲಕ ನೀವು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನೇ ಉಲ್ಲಂಘನೆ ಮಾಡುತ್ತಿದ್ದೀರಿ.. "ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ" ಎಂಬುವುದು ನೆನಪಿರಲಿ ಎಂದು ದೆಹಲಿ ಕೋರ್ಟ್ ನಿರ್ಭಯಾ ಅತ್ಯಾಚಾರಿಗಳ ಪರ ವಕೀಲರಿಗೆ ಛಾಟಿ ಬೀಸಿದೆ.
ಆರೋಪಿಗಳ ಪರ ವಕೀಲ ಎಪಿ ಸಿಂಗ್ ಅವರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿ " ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ. ಈ ಬಗ್ಗೆ ನೀವು ಅತ್ಯಂತ ಜಾಗರೂಕರಾಗಿರಬೇಕು. ನಿಮ್ಮ ಒಂದೇ ಒಂದು ತಪ್ಪು ನಡೆ ದೊಡ್ಡ ಪರಿಣಾಮವನ್ನು ಸೃಷ್ಟಿಸಬಹುದು ಎಂದು ಎಚ್ಚರಿಕೆ ನೀಡಿತು.
ನಿರ್ಭಯಾ ಪ್ರಕರಣದ ಅಪರಾಧಿ ಪವನ್ ಗುಪ್ತಾ ಸಲ್ಲಿಕೆ ಮಾಡಿದ್ದ ಕ್ಯುರೇಟಿವ್ ಅರ್ಜಿಯ ವಿಚಾರಣೆ ನಡೆಸಿದ ದೆಹಲಿಯ ಪಾಟಿಯಾಲಾ ಹೌಸ್ ನ ಸೆಷನ್ಸ್ ನ್ಯಾಯಾಲಯ ಕ್ಯುರೇಟಿವ್ ಅರ್ಜಿಯ ವಜಾಗೊಳಿಸಿದ ಬಳಿಕ ಅಪರಾಧಿಗಳ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ "ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನೇ ಉಲ್ಲಂಘನೆ ಮಾಡುತ್ತಿದ್ದೀರಿ.. ಈ ಬಗ್ಗೆ ನಿಮಗೆ ಎಚ್ಚರವಿರಲಿ " ಎಂದು ವಾರ್ನಿಂಗ್ ನೀಡಿತು.