ನವದೆಹಲಿ, ಮಾ 2 (Daijiworld News/MSP): ಈಶಾನ್ಯ ದೆಹಲಿಯಲ್ಲಿ ಸಿಎಎ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ಪೊಲೀಸ್ ಗೆ 'ಗನ್ ಪಾಯಿಂಟ್'ನಲ್ಲಿ ಬೆದರಿಸಿ ಆತಂಕ ಸೃಷ್ಟಿಸಿ ತಲೆಮರೆಸಿಕೊಂಡಿದ್ದ ಗುಂಡು ಹಾರಿಸಿದ ಶಾರುಕ್ ಉತ್ತರ ಪ್ರದೇಶದ ಬರೇಲಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ
ಫೆಬ್ರವರಿ 24ರಂದು ದೆಹಲಿಯ ಮೌಜ್ ಪುರದಲ್ಲಿ ನಡೆದಿದ್ದ ಹಿಂಸಾಚಾರದ ಮೌಜ್ಪುರ ಚೌಕ್ ಸಮೀಪ ಇದ್ದ ನಿಶಸ್ತ್ರದಾರಿಯಾಗಿ ಒಬ್ಬಂಟಿಯಾಗಿದ್ದ 3ನೇ ಬೆಟಾಲಿಯನ್ನ ಹವಿಲ್ದಾರ್ ದೀಪಕ್ ದಹಿಯಾ ಗನ್ ತೋರಿಸಿ ಮುಂದೆ ಬರದಂತೆ ಬೆದರಿಕೆ ಹಾಕಿದ್ದ .ಈ ವೇಳೆ ಧೈರ್ಯ ಪ್ರದರ್ಶಿಸಿದ್ದ ಪೊಲೀಸ್ ಅಲುಗಾಡದೇ ಸುಮ್ಮನೆ ನಿಂತಿದ್ದರಿಂದ ಎದೆಗೆ ಗನ್ ಪಾಯಿಂಟ್ ಇರಿಸಿ ಬೆದರಿಸಿ ಶಾರುಖ್ ಆರೇಳು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಹಿಂದಕ್ಕೆ ಸರಿದಿದ್ದ.
ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, ದೆಹಲಿ ಅಪರಾಧ ದಳದ ಪೊಲೀಸರು ಶಾರುಕ್ನನ್ನು ಉತ್ತರ ಪ್ರದೇಶದ ಬರೇಲಿಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ದೆಹಲಿ ಪೊಲೀಸರು ಎಎಪಿ ಮುಖಂಡ ತಾಹೀರ್ ಮತ್ತು ಶಾರುಕ್ ನನ್ನು ಬಂಧಿಸಿರುವುದು ತನಿಖೆಗೆ ಬಲ ತಂದಿದೆ. ಇನ್ನು ಇವರಿಬ್ಬರ ನಡುವಿನ ಸಂಪರ್ಕಗಳು ತನಿಖೆಯಲ್ಲಿ ಬಯಲಾಗಿವೆ ಎಂದರು.
ಶಾರುಕ್ ತಂದೆ ಶವರ್ ಪಠಾನ್ 1985ರಲ್ಲಿ ಅರವಿಂದ ನಗರದ ಸ್ಟ್ರೀಟ್ ನಂಬರ್ 5U-108ನಲ್ಲಿದ್ದು ಇಲ್ಲಿಗೆ ಬಂದು ನೆಲೆಸಿದ್ದು ,ಶಾರುಕ್ನ ಮನೆ ಮಂದಿಯೂ ತಲೆಮರೆಸಿಕೊಂಡಿದ್ದಾರೆ.ಆತ ಡ್ರಗ್ ಮಾಫಿಯಾಕ್ಕೋಸ್ಕರ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ