ಕೋಲ್ಕತಾ, ಮಾ 03 (DaijiworldNews/SM): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದೆಲ್ಲೆಡೆ ಹಚ್ಚಿಕೊಂಡಿದ್ದ ಕಿಚ್ಚು ಒಂದಿಷ್ಟು ತಣ್ಣಗಾಗಿದೆ. ದೆಹಲಿ ಪಶ್ಚಿಮ ಬಂಗಾಳ ಸಹಜ ಸ್ಥಿತಿಗೆ ಮರಳಿವೆ. ಈ ನಡುವೆ ಪಶ್ಚಿಮ ಬಂಗಾಲದಲ್ಲಿರುವವರಿಗೆ ಪೌರತ್ವ ನೀಡಲಾಗಿದೆ ಎಂಬುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಎಎ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಶ್ಚಿಮ ಬಂಗಾಳದಲ್ಲಿ ಇರುವವರೆಲ್ಲರೂ ಬಾಂಗ್ಲಾ ದೇಶಿಯರೂ ಕೂಡ ಭಾರತೀಯರೇ ಆಗಿದ್ದಾರೆ. ಅವರಿಗೆ ಈಗಾಗಲೇ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈಗಾಗಲೇ ಭಾರತೀಯ ಪೌರತ್ವ ನೀಡಿರುವ ಕಾರಣದಿಂದಾಗಿ ನೀವು ಮತ್ತೆ ಹೊಸ ಪೌರತ್ವ ನೀಡುವ ಅಗತ್ಯವಿಲ್ಲ ಎಂದಿದ್ದಾರೆ. ಹಾಗೂ ಹೊಸದಾಗಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಇನ್ನು ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪತಿಕ್ರಿಯೆ ನೀಡಿದ ಅವರು, 'ಬಂಗಾಳವನ್ನು ಮತ್ತೊಂದು ದೆಹಲಿಯಾಗಲು ನಾನು ಎಂದಿಗೂ ಬಿಡುವುದಿಲ್ಲ. ಬಾಂಗ್ಲಾದೇಶದಿಂದ ಬಂದು ಇಲ್ಲಿ ವರ್ಷಗಳಿಂದಲೂ ನೆಲೆಸಿರುವವರು ಭಾರತೀಯರೇ ಆಗಿದ್ದಾರೆ ಎಂದಿದ್ದಾರೆ.