ನವದೆಹಲಿ, ಮಾ.04 (DaijiworldNews/PY) : ಈಶಾನ್ಯ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹಿಂಸಾಚಾರದಲ್ಲಿ ಭಾಗಿಯಾದ ಯಾರನ್ನೇ ಆಗಲಿ ಬಿಡಬೇಡಿ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ದೆಹಲಿ ವಿಧಾನಸಭೆ ಫಲಿತಂಶದ ಬಳಿಕ ಮಂಗಳವಾರ ಇದೇ ಪ್ರಥಮ ಬಾರಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರೊಂದಿಗೆ ಮಹತ್ವದ ಭೇಟಿ ನಡೆದಿದ್ದು, ಸಂಸತ್ ಭವನದಲ್ಲಿರುವ ಪ್ರಧಾನಿಯವರ ಕಚೇರಿಯಲ್ಲಿ ಇಬ್ಬರು ನಾಯಕರ ನಡುವೆ ಒಂದು ಗಂಟೆಯ ಕಾಲ ಮಾತುಕತೆ ನಡೆದಿದೆ.
ನಂತರ ಮಾತನಾಡಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಯಾರೊಬ್ಬರೂ ಹಿಂಸೆ ಪ್ರಚೋದಿಸುವಂತೆ ಮಾತನಾಡಬಾರದು. ಇಂತಹ ಗಲಭೆ ನಡೆಯದಂತೆ ಮನವಿ ಮಾಡಿದ್ದು, ಅದಕ್ಕ ಪ್ರಧಾನಿ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಗಲಭೆಯ ಹಿಂದೂ ಸಂತ್ರಸ್ತರಿಗಾಗಿ ಬಿಜೆಪಿ ನಾಯಕರಾದ ಕಪಿಲ್ ಮಿಶ್ರ ಮತ್ತು ತೇಜೇಂದರ್ ಪಾಲ್ ಸಿಂಗ್ ಬಗ್ಗ ಅವರು 71,00,496 ರೂ. ದೇಣಿಗೆ ಸಂಗ್ರಹಿಸಿದ್ದಾರೆ. ಅವರು ಕ್ರೌಡ್ಕ್ಯಾಶ್ ಎಂಬ ದೇಣಿಗೆ ಸಂಗ್ರಹ ವೆಬ್ಸೈಟ್ ಮೂಲಕ ಇಷ್ಟು ಮೊತ್ತದ ದೇಣಿಗೆ ಸಂಗ್ರಹಿಸಿದ್ದಾರೆ.