ಹೈದರಾಬಾದ್, ಮಾ. 04 (Daijiworld News/MB) : ಸಾಮಾಜಿಕ ಜಾಲತಾಣಗಳಲ್ಲಿ ವಿಡಂಬನೆ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲ್ಲೇ ಸುದ್ದಿಯಾಗುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೊರೋನಾ ವೈರಸ್ ಕುರಿತಾಗಿ ಮಾತನಾಡಿದ್ದಾರೆ.
"ನಮ್ಮ ಸಾವು ಕೂಡಾ ಮೇಡ್ ಇನ್ ಚೀನಾ ಆಗುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ" ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಅವರು ಮಾಡಿದ್ದಾರೆ.
ಸಾಮಾನ್ಯವಾಗಿ ಭಾರತೀಯ ನಾಗರಿಕರು ಸರಕುಗಳ ಬ್ರಾಂಡ್ಗೆ ಆದ್ಯತೆ ನೀಡುತ್ತಾರೆ. ಭಾರತದಲ್ಲಿ ಹೆಚ್ಚಾಗಿ ಚೀನಾ ಮೇಡ್ ಸರಕುಗಳನ್ನು ಬಡವರು ಮತ್ತು ಕೆಳ ಮಧ್ಯಮವರ್ಗದವರು ಹೆಚ್ಚಾಗಿ ಕೊಂಡು ಕೊಳ್ಳುತ್ತಾರೆ. ಈಗ ಈ ಚೀನಾದ ಸರಕುಗಳಿಗೂ ಹಾಗೂ ಕೊರೋನಾ ವೈರಸ್ಗೂ ಲಿಂಕ್ ಕಲ್ಪಿಸಿ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಇದೀಗ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಸದ್ಯ ರಾಮ್ ಗೋಪಾಲ್ ವರ್ಮಾ "ಎಂಟರ್ ದಿ ಗರ್ಲ್ ಡ್ರ್ಯಾಗನ್" ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಈ ಸಿನಿಮಾದ ಕೆಲವು ದೃಶ್ಯಗಳನ್ನು ಚೀನಾದಲ್ಲಿ ಚಿತ್ರಿಕರಿಸಲು ವರ್ಮಾ ತೀರ್ಮಾನ ಮಾಡಿದ್ದರು. ಆದರೆ ಇದೀಗ ಕೊರೋನಾ ಭೀತಿಯಿಂದಾಗಿ ಚೀನಾ ಪ್ರವಾಸವನ್ನು ರದ್ದು ಮಾಡಿ ಭಾರತದಲ್ಲೇ ಚಿತ್ರೀಕರಿಸಲು ವರ್ಮಾ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಎಂಟರ್ ದಿ ಗರ್ಲ್ ಡ್ರ್ಯಾಗನ್ ಚಿತ್ರದಲ್ಲಿ ಪೂಜಾ ಬಾಲೇಕರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.