ಬೆಂಗಳೂರು, ಮಾ.04 (DaijiworldNews/PY) : ಹಳೆಯ ನೋಟುಗಳಿಂದ, ಎಟಿಎಂಗಳಿಂದ, ಚಿಲ್ಲರೆ ನಾಣ್ಯಗಳಿಂದ ಕೊರೋನಾ ವೈರಸ್ ಹರಡುತ್ತದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆ ಈ ಎಚ್ಚರಿಕೆ ನೀಡಿದ ಬೆನ್ನಲ್ಲೇ ಚೀನಾದಲ್ಲಿ ಹಳೆಯ ನೋಟುಗಳಿಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ.
ವಿಶ್ವಸಂಸ್ಥೆ ನೀಡಿದ ಮಾಹಿತಿ ಪ್ರಕಾರ, ಹಳೆಯ ನೋಟುಗಳಿಂದ, ಬ್ಯಾಂಕ್ನಿಂದ, ಚಿಲ್ಲರೆ ನಾಣ್ಯಗಳಿಂದ ಹಾಗೂ ಒಬ್ಬರ ಕೈಯಿಂದ ಪಡೆದರೆ ಕೊರೋನಾ ವೈರಸ್ ಬರಬಹುದು ಎಂದು ತಿಳಿಸಿದೆ. ಅಲ್ಲದೆ ಎಟಿಎಂ ಹಣದಿಂದ ಹಾಗೂ ಟಿಕೆಟ್ ಮೆಷಿನ್ನಿಂದಲೂ ಕೊರೋನಾ ವೈರಸ್ ಬರಬಹುದು ಎಂದು ತಿಳಿಸಿದೆ.
ಸೋಂಕು ಇದ್ದವರನ್ನು ಅಪ್ಪಿಕೊಂಡರೆ ಹಾಗೂ ಕೈ ಕುಲುಕಿದರೆ ಕೊರೋನಾ ವೈರಸ್ ಬರುವ ಸಾಧ್ಯತೆಗಳಿವೆ. ಇದರೊಂದಿಗೆ ಕಾಫಿ ಮೆಷಿನ್, ಫೋನ್, ಆಫೀಸ್ ಡೋರ್ ಹ್ಯಾಂಡಲ್ ಹಾಗೂ ಸ್ಮಾರ್ಟ್ಫೋನ್ನಿಂದಲೂ ಕೊರೋನಾ ವೈರಸ್ ಬರುವ ಸಾಧ್ಯತೆಗಳಿವೆ. ಸಾರ್ವಜನಿಕ ಶೌಚಾಲದಿಂದ ಹಾಗೂ ವಿಮಾನದ ಸೀಟಿನಿಂದಲೂ ಕೂಡಾ ಕೊರೋನಾ ವೈರಸ್ ಹರಡುತ್ತದೆ ಎಂಬುದಾಗಿ ವಿಶ್ವಸಂಸ್ಥೆ ಮಾಹಿತಿ ನೀಡಿದೆ.