ನವದೆಹಲಿ, ಮಾ.04 (DaijiworldNews/PY) : "ಕೋವಿಡ್ 19 ಸೋಂಕು ದೇಶದಲ್ಲಿ ಪಸರಿಸುತ್ತಿದ್ದು, ಇತ್ತೀಚೆಗೆ ಇಟಲಿಗೆ ಹೋಗಿ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಿ" ಎಂದು ದೆಹಲಿಯ ಬಿಜೆಪಿ ಸಂಸದ ರಮೇಶ್ ಬಿಧೂರಿ ಹೇಳಿದ್ದಾರೆ.
"ಇತ್ತೀಚೆಗೆ ರಾಹುಲ್ ಗಾಂಧಿ ಅವರು ಇಟಲಿಗೆ ಹೋಗಿ ಬಂದಿದ್ಧಾರೆ. ವಿಮಾನ ನಿಲ್ದಾಣದಲ್ಲಿ ಅವರನ್ನು ತಪಾಸಣೆ ಮಾಡಿದ್ದಾರೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ. ಅವರಿಗೆ ಮಹಾಮಾರಿ ಕೊರೋನಾ ವೈರಸ್ ಸೋಂಕು ತಗುಲಲಿಲ್ಲ ಎಂಬುವುದನ್ನು ದೃಢಪಡಿಸಲು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲಿ" ಎಂದಿದ್ಧಾರೆ.
ಮಾಧ್ಯಮದವರೊಂದಿಗೆ ಸಂಸತ್ತಿನ ಹೊರಗೆ ಮಾತನಾಡಿದ ಬಿಧೂರಿ ಅವರು, "ಕೊರೋನಾ ವೈರಸ್ ಬಗ್ಗೆ ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಭಾರತದಲ್ಲಿ 28 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಇದು ಗಂಭೀರ ಪರಿಸ್ಥಿತಿ" ಎಂದಿದ್ದಾರೆ.