ಹೈದರಾಬಾದ್, ಮಾ.04 (DaijiworldNews/PY) : ಇಬ್ಬರು ವ್ಯಕ್ತಿಗಳಿಗೆ ಹೈದರಾಬಾದ್ನಲ್ಲಿ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ತೆಲಂಗಾಣದ ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬುಧವಾರ ಪತ್ತೆಯಾದ ಪ್ರಕರಣಗಳಲ್ಲಿ ಓರ್ವ ವ್ಯಕ್ತಿ ನಗರದ ಟೆಕ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಹಾಗಾಗಿ ಆ ವ್ಯಕ್ತಿ ಕೆಲಸ ಮಾಡುತ್ತಿದ್ದ ಕಂಪೆನಿಯ ಎರಡು ಕ್ಯಾಂಪಸ್ಗಳಲ್ಲಿನ ನೌಕರರನ್ನು ಮನೆಗೆ ಕಳುಹಿಸಲಾಗಿದೆ.
ಇತ್ತೀಚೆಗೆ ಇಟಲಿಗೆ ಹೋಗಿ ಬಂದಿದ್ದ ವ್ಯಕ್ತಿಗೆ ಸೋಂಕು ತಗುಲಿದ್ದು, ಅವರೊಂದಿಗೆ ಸಂಪರ್ಕದಲ್ಲಿದ್ದ ಮತ್ತೊಬ್ಬ ವ್ಯಕ್ತಿಗೂ ಈ ಸೋಂಕು ಹರಡಿದೆ ಎಂದು ಹೇಳಲಾಗಿದೆ.
ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಇವರಿಬ್ಬರಿಗೂ ಪ್ರಾಥಮಿಕ ತಪಾಸಣೆ ಮಾಡಲಾಗಿತ್ತು. ಪುಣೆಯ ಎನ್ವಿಎಲ್ ಲ್ಯಾಬ್ಗೆ ಹೆಚ್ಚಿನ ಪರೀಕ್ಷೆಗಾಗಿ ಸ್ಯಾಂಪಲ್ಗಳನ್ನು ಕಳುಹಿಸಲಾಗಿದೆ. ಇದರ ಫಲಿತಾಂಶ ನಾಳೆ ಸಿಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.