ನವದೆಹಲಿ, ಮಾ. 05 (Daijiworld News/MB) : ಪೇಟಿಎಂ ಉದ್ಯೋಗಿಯೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು ಸಂಸ್ಥೆಯು ಗುರ್ಗಾಂವ್ನಲ್ಲಿರುವ ಕಚೇರಿಯನ್ನು 2 ದಿನಗಳ ಕಾಲ ಮುಚ್ಚಲಿದೆ.
ಕೊರೋನಾ ವೈರಸ್ಗೆ ಪತ್ತೆಯಾದ ಪೇಟಿಎಂ ಉದ್ಯೋಗಿ ಇತ್ತೀಚೆಗೆ ಇಟಲಿಯಿಂದ ವಾಪಸ್ ಬಂದಿದ್ದ ಎಂದು ಪೇಟಿಎಂ ಪ್ರಕಟನೆಯಲ್ಲಿ ತಿಳಿಸಿದ್ದು ಭಾರತದಲ್ಲಿ ದೃಢಪಟ್ಟ 29ನೇ ಕೊರೋನಾ ವೈರಸ್ ಪ್ರಕರಣ ಇದಾಗಿದೆ.
ಪೇಟಿಎಂ ತನ್ನ ಉದ್ಯೋಗಿಗಳಿಗೆ ಮುಂದಿನ 2 ದಿನಗಳ ಕಾಲ ಮನೆಯಲ್ಲಿಯೇ ಕೆಲಸ ನಿರ್ವಹಿಸುವಂತೆ ಸೂಚಿಸಿದೆ.
ಈವರೆಗೂ ಭಾರತದಲ್ಲಿ 29 ಮಂದಿಗೆ ಕೊರೋನಾ ವೈರಸ್ ತಗಲಿದ್ದು ಆ ಪೈಕಿ 15 ಮಂದಿ ಇಟಲಿ ಪ್ರವಾಸಿಗರಾಗಿದ್ದಾರೆ. ಹಾಗೆಯೇ ಇವರೊ೦ದಿಗೆ ಪ್ರಯಾಣ ಮಾಡಿದ್ದ ಭಾರತೀಯ ಚಾಲಕ ಕೂಡಾ ಕೊರೋನಾ ವೈರಸ್ಗೆ ತುತ್ತಾಗಿದ್ದಾನೆ.
ಈಗಾಗಲೇ 5 ಲಕ್ಷ ಜನರಿಗೆ ಕೊರೋನಾ ವೈರಸ್ ತಪಾಸಣೆ ಮಾಡಲಾಗಿದೆ.