ಬೆಂಗಳೂರು, ಮಾ. 05 (Daijiworld News/MB) : ರೈತರ ಪರವಾಗಿ ಬಜೆಟ್ ಮಂಡಿಸುತ್ತೇನೆ, ರೈತರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಜೆಟ್ ಕುರಿತಾಗಿ ಪ್ರತಿಕ್ರಿಯಿಸಿದ ಅವರು ಕೃಷಿಗೆ ಬೇಕಾದ ಯೋಜನೆ ರೂಪಿಸಲು ಪ್ರಯತ್ನ ಮಾಡಿದ್ದೇನೆ. ಉತ್ತಮ ಬಜೆಟ್ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ.
ಹಾಗೆಯೇ ಈ ಹಿಂದಿನ ಯಾವುದೇ ಯೋಜನೆ ಕಡಿತಗೊಳಿಸಿಲ್ಲ ಎಂದು ತಿಳಿಸಿದ್ದಾರೆ.