ಬೆಂಗಳೂರು, ಮಾ 5(Daijiworld News/MSP): ತೆಲಂಗಾಣದಲ್ಲಿ ಶಂಕಿತ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ತನ್ನ ನೌಕರರಿಗೆ ಮುಖಗವಸು ಧರಿಸುವಂತೆ ಸೂಚಿಸಿದೆ. ಮಾತ್ರವಲ್ಲದೆ ರಾಜ್ಯದ 17 ವಿಭಾಗಗಳಲ್ಲಿ 84 ಡಿಪೋಗಳ 86,000 ಬಸ್ಗಳನ್ನು ಸ್ವಚ್ಚತೆಗಾಗಿ ನಿಗಮ ಕ್ರಮ ಕೈಗೊಂಡಿದೆ. ಮಾರ್ಚ್ 4 ರ ಬುಧವಾರದಿಂದ ಈ ಕ್ರಮಗಳನ್ನು ಕೈಗೊಳ್ಳಲಾಯಿತು.
ಡೆಟಾಲ್ ಮತ್ತು ಇತರ ಉತ್ಪನ್ನಗಳನ್ನು ಒಳಗೊಂಡಂತೆ ಸೋಂಕುನಿವಾರಕಗಳನ್ನು ಬಸ್ಸುಗಳ ಒಳಗೆ ಮತ್ತು ಹೊರಗೆ ಸಿಂಪಡಿಸಲಾಗುತ್ತಿದೆ. ಬಸ್ ಗಳನ್ನು ಸಂಪೂರ್ಣ ಸ್ವಚ್ಚಗೊಳಿಸುವಂತೆ ಡಿಪೋಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಬೆಂಗಳೂರು ಬಿಎಂಟಿಸಿ ಬೆಂಗಳೂರು ಮತ್ತು ಮಂಗಳೂರು, ಚಿತ್ರದುರ್ಗ, ಚಾಮರಾಜನಗರ, ಹಾಸನ ಮತ್ತು ಇತರ ವಿಭಾಗಗಳಲ್ಲಿ ಸ್ವಚ್ಚತೆಯ ಕಾರ್ಯ ಕೈಗೊಳಲಾಗಿದೆ.
ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸರಾಸರಿ 35.7 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅದರಂತೆ, ಆಸನಗಳು, ಬಾಗಿಲುಗಳು, ಹ್ಯಾಂಡಲ್ಗಳು ಇತ್ಯಾದಿಗಳಿಗೆ ಸೋಂಕುನಿವಾರಕಗಳನ್ನು ಸಿಂಪಡಿಸಲಾಗಿದೆ.
ಪ್ರಯಾಣಿಕರಿಗೆ ಕೆಮ್ಮು ಮತ್ತು ಸೀನುವಾಗ ಮಾಸ್ಕ್ ಧರಿಸಲು ಸೂಚಿಸಲಾಗುತ್ತಿದೆ. ಕರೋನವೈರಸ್ ಹರಡುವಿಕೆಯ ವಿರುದ್ಧ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಕೆಎಸ್ಆರ್ಟಿಸಿ ಚಾಲಕರು, ಕಂಡಕ್ಟರ್ಗಳು ಮತ್ತು ವೈದ್ಯರು ಮತ್ತು ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಇತರ ಸಿಬ್ಬಂದಿಗೆ ಕೊರಾನಾ ವೈರಸ್ ಸಂಬಂಧಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮಾಹಿತಿ ಒದಗಿಸಲಾಗುತ್ತಿದೆ.