ಮುರ್ಷಿದಾಬಾದ್, ಮಾ. 05 (Daijiworld News/MB) : ವ್ಯಕ್ತಿಯೊಬ್ಬರಿಗೆ ನಾಯಿಯ ಚಿತ್ರವಿರುವ ಮತದಾರ ಗುರುತಿನ ಚೀಟಿ ನೀಡಿರುವ ಘಟನೆ ಪಶ್ಚಿಮಬಂಗಾಳದ ಮುರ್ಶಿದಾಬಾದ್ನ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
"ನಾನು ನನ್ನ ವೋಟರ್ ಐಡಿ ಕಾರ್ಡ್ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದೆ. ತಿದ್ದುಪಡಿಯಾದ ಕಾರ್ಡ್ ದೊರೆಯಿತು. ಆದರೆ ಅದರಲ್ಲಿ ನನ್ನ ಫೋಟೊದ ಬದಲಿಗೆ ನಾಯಿಯ ಫೋಟೊ ಇತ್ತು" ಎಂದು ಸುನೀಲ್ ಕರ್ಮಾಕರ್ ತಿಳಿಸಿದ್ದಾರೆ
ನನಗೆ ನಿನ್ನೆ ದುಲಾಲ್ ಸ್ಮತಿ ಶಾಲೆಗೆ ಬರುವಂತೆ ಹೇಳಿದರು. ಅಲ್ಲಿ ನನಗೆ ವೋಟರ್ ಕಾರ್ಡ್ ನೀಡಿದರು. ಆದರೆ ಅದರಲ್ಲಿರುವ ಫೋಟೋ ನೋಡಿ ನನಗೆ ಶಾಕ್ ಆಯಿತು. ಅಧಿಕಾರಿ ಸಹಿ ಹಾಕಿ ವೋಟರ್ ಐಡಿ ನೀಡಿದ್ದಾರೆ ಆದರೆ ನನ್ನ ಫೋಟೋವನ್ನೇ ನೋಡಿಲ್ಲ. ನಾನು ಈ ಬಗ್ಗೆ ಬಿಡಿಒ ಕಚೇರಿಗೆ ತೆರಳಿ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡುತ್ತೇನೆ ಎಂದು ಕರ್ಮಾಕರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ), "ವೋಟರ್ ಐಡಿ ಫೋಟೋವನ್ನು ಈಗಾಗಲೇ ಸರಿಪಡಿಸಲಾಗಿದೆ. ತಿದ್ದುಪಡಿಗೊಂಡ ಕಾರ್ಡ್ ಕರ್ಮಾಕರ್ ಅವರಿಗೆ ನೀಡಲಾಗುತ್ತದೆ. ಇದೊಂದು ಅಂತಿಮ ಕಾರ್ಡ್ ಅಲ್ಲ. ತಪ್ಪುಗಳಿದ್ದಲ್ಲಿ ಅದನ್ನು ಸರಿಪಡಿಸುತ್ತೇವೆ. ಆನ್ಲೈನ್ನಲ್ಲಿ ಅರ್ಜಿ ತುಂಬುವ ಸಂದರ್ಭದಲ್ಲಿ ಯಾರೋ ಒಬ್ಬರು ಈ ಕೆಲಸವನ್ನು ಮಾಡಿರಬಹುದು ಎಂದು ತಿಳಿಸಿದ್ದಾರೆ.