ಬೆಂಗಳೂರು, ಮಾ. 05 (Daijiworld News/MB) : ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಆರಂಭಿಸಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ
ಬಜೆಟ್ ಆರಂಭ ಮಾಡುತ್ತಿದ್ದಂತೆ ವಿರೋಧ ಪಕ್ಷದವರು ಬಜೆಟ್ ಕಾಪಿ ನೀಡಲು ಆಗ್ರಹಿಸಿದ್ದು ಸದನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಕಳೆದ ವರ್ಷವೂ ಇದೇ ರೀತಿ ಮಾಡಲಾಗಿತ್ತು. ಕಳೆದ ಸರ್ಕಾರವೂ ಬಜೆಟ್ ಪ್ರತಿ ನೀಡಿಲ್ಲ ಎಂದು ಸ್ಪೀಕರ್ ಕಾಗೇರಿ ಮತ್ತು ಸಚಿವ ಮಾದೇಸ್ವಾಮಿ ಹೇಳಿದರು.
ಆ ಕೂಡಲೇ ಪ್ರತಿಯೋರ್ವರಿಗೂ ಬಜೆಟ್ ಪುಸ್ತಕ ನೀಡಲು ಮುಖ್ಯಮಂತ್ರಿ ಬಿ ಎಸ್ ವೈ ಸೂಚನೆ ನೀಡಿದ್ದಾರೆ.
ಹಾಗೆಯೇ ಭಾಷಣ ಆರಂಭ ಮಾಡಿದ ಅವರು ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.