ಬೆಂಗಳೂರು, ಮಾ.05 (DaijiworldNews/PY) : ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಆರಂಭಿಸಿದ್ದು, ರೈತರಿಗೆ ಕೇಂದ್ರ 6000 ರೂ ಜೊತೆಗೆ 4000ರೂ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ರೈತರಿಗೆ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್. ರೈತರು ಅಧಿಕ ಬಡ್ಡಿ ದರದಿಂದ ತಪ್ಪಿಸಲು ಹೊಸ ಕಾರ್ಯಕ್ರಮ ರೂಪಿಸಲಾಗುವುದ ದು ಎಂದು ತಿಳಿಸಿದ್ಧಾರೆ.
ರೈತರನ್ನು ಸಾಲಮುಕ್ತರನ್ನಾಗಿಸಲು ಪಣ ತೊಟ್ಟಿದ್ದೇವೆ. ಬರ ನಿರೋಧಕ ಬೆಳೆಗಳಿಗೆ ಪ್ರೋತ್ಸಾಹ, ಸಿರಿಧಾನ್ಯಗಳನ್ನು ಬೆಳೆಯಲು ಪ್ರತಿ ಹೆಕ್ಟೇರ್ಗೆ 10 ಸಾವಿರದಂತೆ ಪ್ರೋತ್ಸಾಹಧನ ಕೊಡುತ್ತಿದ್ದೇವೆ. ಸಿರಿಧಾನ್ಯಗಳ ಪಟ್ಟಿಗೆ ಇನ್ನಷ್ಟು ಧಾನ್ಯಗಳನ್ನು ಸೇರಿಸುತ್ತೇವೆ ಎಂದಿದ್ಧಾರೆ.
ಕೃಷಿಗಾಗಿ ಹೊಸ ಕೃಷಿ ನೀತಿ ಜಾರಿಗೆ ತರಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೇಂದ್ರ ಸರ್ಕಾರದ 6 ಸಾವಿರ ಜೊತೆಗೆ, ನಮ್ಮ ಸರ್ಕಾರ 4 ಸಾವಿರ ಘೋಷಿಸಿದೆ.
ಈವರೆಗೆ 41 ಲಕ್ಷ ಬ್ಯಾಂಕ್ ಖಾತೆಗಳಿಗೆ 825 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಈ ಯೋಜನೆ ಮುಂದುವರೆಸಲು 2600 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಎಲ್ಲಾ ರೈತರಿಗೆ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎನ್ನುವ ಮೂಲಕ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದ ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.