ಬೆಂಗಳೂರು, ಮಾ 5(Daijiworld News/MSP): ರಾಜ್ಯ ಸರ್ಕಾರದಿಂದ 60 ವರ್ಷ ಮೀರಿದ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರೀಕರಿಗೆ ವಿಶೇಷ ಕೊಡುಗೆ ನೀಡಿದ್ದು, ದೇಶದ ಪ್ರಸಿದ್ಧ ತೀರ್ಥ ಸ್ಥಳಗಳಿಗೆ ಉಚಿತವಾಗಿ ಕರೆದುಕೊಂಡು ಹೋಗಿಬರುವಂತ ಪ್ರವಾಸ ವ್ಯವಸ್ಥೆಯನ್ನು "ಜೀವನ ಚೈತ್ರ ಯಾತ್ರೆ" ಯೋಜನೆ ಮೂಲಕ ಘೋಷಣೆ ಮಾಡಿದೆ.
ರಾಜ್ಯದ ಹಿರಿಯ ನಾಗರೀಕರಿಗೆ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುವಂತ ಯೋಜನೆಯನ್ನು ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಪರಿಚಯಿಸಲಾಗುತ್ತಿದ್ದು ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಟೂರ್ ಮಾಡಿಕೊಂಡು ಬರಬಹುದಾಗಿದೆ..
60 ವರ್ಷ ಮೀರಿದ ಬಡತನ ರೇಖೆಗಿಂದ ಕೆಳಗೆ ಇರುವಂತ ಹಿರಿಯ ನಾಗರೀಕರಿಗೆ ಉಚಿತವಾಗಿ ತೀರ್ಥ ಯಾತ್ರೆ ಕೈಗೊಳ್ಳುವಂತ ಯೋಜನೆಗೆ ಚಾಲನೆ ನೀಡಿದೆ. ಇದಕ್ಕಾಗಿ ರಾಜ್ಯ ಬಜೆಟ್ ನಲ್ಲಿ 20 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ.