ಬೆಂಗಳೂರು, ಮಾ. 05 (Daijiworld News/MB) : ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಡನೆ ಮಾಡಿದ ಬಜೆಟ್ ಜನವಿರೋಧಿಯಾಗಿದೆ. ಯಡಿಯೂರಪ್ಪನವರು ಗಾಯದ ಮೇಲೆ ಉಪ್ಪು ಸವರಿದ್ದಾರೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಬೆಲೆ ಏರಿಕೆಗೆ ಕಾರಣವಾಗುವ ಪೆಟ್ರೋಲ್ ಡಿಸೇಲ್ ತೆರಿಗೆ ಹೆಚ್ಚು ಮಾಡಿರುವುದು ದೊಡ್ಡ ನಿರಾಶೆಯಾಗಿದೆ. ಜನರು ಹೆಚ್ಚಿದ ಹಣದುಬ್ಬರ ಹಾಗೂ ಕಡಿತವಾದ ಆದಾಯದಿಂದಾಗಿ ತತ್ತರಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಯಡಿಯೂರಪ್ಪನವರು ಬೆಲೆಗಳನ್ನು ಮತ್ತಷ್ಟು ಏರಿಸುವ ಮೂಲಕ ಗಾಯಕ್ಕೆ ಉಪ್ಪು ಸವರುವ ಕಾರ್ಯ ಮಾಡಿದ್ದಾರೆ. ಸಾಮಾನ್ಯ ಜನರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ.