ನವದೆಹಲಿ, ಮಾ. 05 (Daijiworld News/MB) : ದೆಹಲಿ ಹಿಂಸಾಚಾರ ಸಂದರ್ಭದಲ್ಲಿ ಗುಪ್ತಚರ ಇಲಾಖೆಯ ಉದ್ಯೋಗಿಯ ಹತ್ಯೆಗೈದ ಆರೋಪ ಎದುರಿಸಿ ಅಮಾನತುಗೊಂಡಿರುವ ಆಮ್ ಆದ್ಮಿ ಪಕ್ಷದ ನಾಯಕ ತಾಹಿರ್ ಹುಸೈನ್ ಶರಣಾತನಾಗಲು ನ್ಯಾಯಾಲಯದ ಮುಂದೆ ಗುರುವಾರ ಹಾಜರಾದರು.
ಈಶಾನ್ಯ ದಿಲ್ಲಿಯ ಜಾಫ್ರಬಾದ್ನ ಚರಂಡಿಯಲ್ಲಿ ಅಂಕಿತ್ ಶರ್ಮಾ ಎಂಬ ಗುಪ್ತಚರ ಅಧಿಕಾರಿಯ ಶವ ಪತ್ತೆಯಾಗಿತ್ತು. ಈ ಹತ್ಯೆಯಲ್ಲಿ ತಾಹಿರ್ ಹಿಸೈನ್ ಭಾಗಿಯಾಗಿದ್ದಾರೆ ಎಂದು ಅಂಕಿತ್ ತಂದೆ ದೂರಿದ್ದರು. ಆದರೆ ಇದನ್ನು ತಾಹೀರ್ ಅಲ್ಲಗಳೆದಿದ್ದರು
ಅಂಕಿತ್ ತಂದೆ ದೂರಿನನ್ವಯ ತಾಹಿರ್ ಹುಸೈನ್ ಮೇಲೆ ಹತ್ಯೆ ಪ್ರಕರಣ ದಾಖಲಿಸಲಾಗಿತ್ತು.
ಅಂಕಿತ್ ಹತ್ಯೆ ಪ್ರಕರಣದಲ್ಲಿ ತಾಹೀರ್ ಹುಸೈನ್ ಹೆಸರು ಕೇಳಿ ಬಂದ ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.