ಬೆಂಗಳೂರು, ಮಾ.05 (DaijiworldNews/PY) : "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಘೋಷಿಸಿರುವ ಅನುದಾನ ಸಾಲುವುದಿಲ್ಲ. ಆಸ್ಪತ್ರೆಗಳಿಗೆ ಅದರಲ್ಲಿ ಸುಣ್ಣ-ಬಣ್ಣ ಬಳಿಯಲು ಸಾಧ್ಯವಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಬಜೆಟ್ ಮಂಡನೆ ಸಂದರ್ಭ ನಾವು ನಿರೀಕ್ಷೆ ಮಾಡಿದಷ್ಟು ಶೇ. 14ರಷ್ಟು ತೆರಿಗೆ ಅಧಿಕ ಸಂಗ್ರಹವಾಗಿದೆ. ಹಲವು ಸವಾಲುಗಳ ನಡುವೆಯೂ ರಾಜ್ಯದ ತೆರಿಗೆ ಸಂಗ್ರಹ ಪರಿಸ್ಥಿತಿ ಉತ್ತಮವಾಗಿದೆ" ಎಂದರು.
"ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನೇ ಮುಂದುವರಿಸಲಾಗಿದೆ. ಈ ಬಾರಿ ಮಂಡಿಸಲಾದ ಘೋಷಣೆಗಳಲ್ಲಿ ಸ್ಪಷ್ಟತೆಯಿಲ್ಲ. ಹೊಸ ಯೋಜನೆಗಳನ್ನು ಬಿಜೆಪಿಯವರಿಂದ ಜಾರಿಗೆ ತರಲು ಸಾಧ್ಯವಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಸಿಗಬೇಕಾದ ತೆರಿಗೆ ಪಾಲು ಸಿಗುತ್ತೋ ಇಲ್ಲವೋ ಎಂಬ ಅನುಮಾನ ರಾಜ್ಯ ಸರ್ಕಾರಕ್ಕಿದೆ" ಎಂದು ಹೇಳಿದರು.
"ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬುವುದಾಗಿ ಸಿಎಂ ಬಿಎಸ್ವೈ ಅವರೇ ಹೇಳಿಕೊಂಡಿದ್ದಾರೆ" ಎಂದರು.