ಚಂಡೀಗಢ, ಮಾ.05 (DaijiworldNews/PY) : ಕೊರೋನಾ ವೈರಸ್ ಸೋಂಕು ಶಂಕಿತ ವ್ಯಕ್ತಿಯೋರ್ವ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿ ಓಡಿ ಹೋಗಿದ್ದ ಘಟನೆ ಪಂಜಾಬ್ನ ಮೊಗದಲ್ಲಿ ನಡೆದಿದೆ.
ದುಬೈನಿಂದ ಬುಧವಾರ ಮರಳಿದ್ದ ಈತನಲ್ಲಿ ಶ್ವಾಸಕೋಶ ತೊಂದರೆ ಕಾಣಿಸಿಕೊಂಡಿತ್ತು. ಹಾಗಾಗಿ ಆತನನ್ನು ಅಲ್ಲಿನ ಸರ್ಕಾರ ಆಸ್ಪತ್ರೆಯೊಂದರ ಪ್ರತ್ಯೇಕ ವಾರ್ಡ್ನಲ್ಲಿ ದಾಖಲಿಸಲಾಗಿದ್ದು, ಕೆಲ ಪರೀಕ್ಷೆಗಳನ್ನು ಮಾಡಲಾಗಿತ್ತು. ಅಲ್ಲದೇ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿತ್ತು. ಕೆಲ ಪರೀಕ್ಷೆಗಳು ಇನ್ನೂ ಬಾಕಿ ಇರುವ ಸಂದರ್ಭ ಆತ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ಧಾನೆ. ಸ್ವಲ್ಪ ಸಮಯದ ಬಳಿಕ ಆತ ಪುನಃ ಬಂದು ವಿವಿಧ ಪರೀಕ್ಷೆಗಳಿಗೆ ಸುಹಕರಿಸಿದ್ದಾನೆ.
ಆತ ಪ್ರತ್ಯೇಕ ವಾರ್ಡ್ನಲ್ಲಿ ದಾಖಲಾಗಲು ಭಯಗೊಂಡಿದ್ದ. ಆತನ ಫೋಟೋ ತೆಗೆಯಲು ಮಾಧ್ಯಮಗಳು ಯತ್ನಿಸಿದ್ದು, ಆತನಿಗೆ ಮತ್ತಷ್ಟು ಗಾಬರಿ ಹೆಚ್ಚಿಸಿತ್ತು. ಆತ ಬಳಿಕ ಕಣ್ಮರೆಯಾಗಿದ್ದ. ಇದಾದ ನಂತರ ಪೊಲೀಸರ ಸಮೇತ ಆಸ್ಪತ್ರೆಯ ವೈದ್ಯರ ತಂಡವೊಂದು ಆತನ ಮನೆಗೆ ತೆರಳಿ ಕುಟುಂಬದವರೊಂದಿಗೆ ಮಾತನಾಡಿದ್ದಾರೆ. ಇದಾದದ ನಂತರ ಆತ ಉಳಿದ ಸ್ಯಾಂಪಲ್ಗಳನ್ನು ನೀಡಿದ್ಧಾನೆ. ಸ್ವಲ್ಪ ಸಮಯದ ಬಳಿಕ ಆಸ್ಪತ್ರೆಗೆ ತೆರಳಿದ ಆತ ವಿಶೇಷ ವಾರ್ಡ್ನಲ್ಲಿ ದಾಖಲಾಗಿದ್ದು, ಆತನನ್ನು ಅಬ್ಸರ್ವೇಶನ್ನಲ್ಲಿ ಇಡಲಾಗಿದೆ. ಪ್ರಾರಂಭಿಕ ಮಾಹಿತಿ ಪ್ರಕಾರ, ಆತನಿಗೆ ನ್ಯೂಮೋನಿಯಾ ಆಗಿದೆ. ಕೊರೋನಾ ವೈರಸ್ ಇದೆಯೋ ಇಲ್ಲವೋ ಎಂದು ಇನ್ನೂ ತಿಳಿದಿಲ್ಲ. ಕೊರೋನಾ ವೈರಸ್ ಪತ್ತೆಗೆ ಈತನ ಕೆಲ ಸ್ಯಾಂಪಲ್ಗಳನ್ನು ಕಳುಹಿಸಲಾಗಿದ್ದು, ವೈದ್ಯರು ಫಲಿತಾಂಶಕ್ಕಾಗಿ ಕಾಯುತ್ತಿದ್ಧಾರೆ.
ಈ ಸೋಂಕಿನ ಶಂಕೆ ಚಂಡೀಗಢದ ಇಬ್ಬರಲ್ಲಿ ವ್ಯಕ್ತವಾಗಿದೆ. ಇದರಲ್ಲಿ ಒಬ್ಬಾತ ಇಂಡೋನೇಷ್ಯಾ,ಸಿಂಗಾಪುರದಿಂದ ಮರಳಿದ್ದ. ಮತ್ತೊಬ್ಬ ಬಾಲಿಯಿಂದ ವಾಪಾಸಾಗಿದ್ದ. ವೈದ್ಯಕೀಯ ತಪಾಸಣೆಗೆ ಇವರಿಬ್ಬರನ್ನೂ ಒಳಪಡಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.