ನವದೆಹಲಿ, ಮಾ.05 (DaijiworldNews/PY) : 2019-20ನೇ ಸಾಲಿನ ಹಣಕಾಸು ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಬಡ್ಡಿದರವನ್ನು ಶೇ.8.50ಕ್ಕೆ ಇಳಿಕೆ ಮಾಡಲು ಇಪಿಎಫ್ಒನ ಕೇಂದ್ರೀಯ ಧರ್ಮದರ್ಶಿ ಮಂಡಳಿ ಸಭೆಯಲ್ಲಿ ಗುರುವಾರ ತೀರ್ಮಾನಿಸಲಾಗಿದೆ.
2018-19ನೇ ಸಾಲಿನಲ್ಲಿ ಶೇ.8.65ರಷ್ಟಿದ್ದ ಇಪಿಎಫ್ ಬಡ್ಡಿದರವನ್ನು 2019-20ನೇ ಸಾಲಿಗೆ ಶೇ.8.50ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ಧಾರೆ.
ಶೇ.85ರಷ್ಟು ಇಪಿಎಫ್ಒನ ವಾರ್ಷಿಕ ಸಂಗ್ರಹದಲ್ಲಿ ಡೆಬ್ಟ್ ಹೂಡಿಕೆಗಳಲ್ಲಿ ಹಾಗೂ ಈಕ್ವಿಟಿ ಫಂಡ್ಗಳಲ್ಲಿ ಶೇ.15ರಷ್ಟು ಹೂಡಿಕೆ ಮಾಡುತ್ತಿದ್ದು, ಕಳೆದ ವರ್ಷ ಮಾರ್ಚ್ ಅಂತ್ಯಕ್ಕೆ ಒಟ್ಟು . 74,324 ಕೋಟಿ. ರೂ ಇಪಿಎಫ್ಒನ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿ, ಶೇ.14.74ರಷ್ಟು ಗಳಿಕೆ ಕಂಡಿದೆ.
ಬ್ಯಾಂಕ್ ಬಡ್ಡಿ, ಅಂಚೆ ಕಚೇರಿ ಸಣ್ಣ ಉಳಿತಾಯ ಹಾಗೂ ಠೇವಣಿಗಳ ಬಡ್ಡಿ ದರಗಳು ಇಳಿಕೆಯಾಗಿದ್ದು, ಅದಕ್ಕೆ ಅನುಗುಣವಾಗಿ ಪ್ರಸಕ್ತ ಹಣಕಾಸು ವರ್ಷದ ಶೇ. 8.5ಕ್ಕೆ ಇಪಿಎಫ್ ಬಡ್ಡಿ ದರ ಇಳಿಸಲು ತೀರ್ಮಾನಿಸಲಾಗಿದೆ.