ಬೆಂಗಳೂರು, ಮಾ 05(DaijiworldNews/SM): ಆಡಳಿತ ಪಕ್ಷಗಳು ಬಜೆಟ್ ಮಂದಿಸಿದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಟೀಕಿಸುವುದು ಸಾಮಾನ್ಯವಾಗಿದೆ. ಅದರಂತೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಿದ್ದ ಬಜೆಟ್ ಗೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮಂಡಿಸಿರುವ ಬಜೆಟ್ ಮುನ್ನೋಟವಿಲ್ಲದ ಬಜೆಟ್ ಆಗಿದೆ. ಯಾವುದೇ ನಿರೀಕ್ಷಿತ ಯೋಜನೆಗಳು ಬಜೆಟ್ ನಲ್ಲಿಲ್ಲ. ಕೇವಲ ಹಸಿರು ಶಾಲು ಹಾಕಿದರೆ ರೈತರ ಪರ ಎಂದು ಆಗಲ್ಲ. ಹಾಗೂ ರೈತರು ಉದ್ದಾರ ಕೂಡ ಆಗಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಇನ್ನು ಸಿಎಂ ಯಡಿಯೂರಪ್ಪನವರನ್ನು ಲೇವಡಿ ಮಾಡಿದ ಅವರು, ಮಂಡ್ಯದಲ್ಲಿ ಲಿಂಬೆಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದವರು, ನಿಜವಾಗಿಯೂ ವ್ಯವಸಾಯ ಮಾಡಿದ್ದಾರೆಯೇ ಎಂಬುವುದು ಗೊತ್ತಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.