ನವದೆಹಲಿ, ಮಾ. 06 (Daijiworld News/MB) : ಯೆಸ್ ಬ್ಯಾಂಕ್ನ ಸಮಸ್ಯೆ ಪರಿಹಾರ ಮಾಡಲು ಆರ್ಬಿಐ ಪ್ರಯತ್ರನ ಮಾಡುತ್ತಿದೆ. ಆರ್ಬಿಐನೊಂದಿಗೆ ಸರ್ಕಾರವು ನಿರಂತರವಾಗಿ ಸಂಪರ್ಕದಲ್ಲಿದೆ. ಯೆಸ್ ಬ್ಯಾಂಕಿನಲ್ಲಿ ಠೇವಣಿ ಇರಿಸಿದವರ ಹಣ ಸುರಕ್ಷಿತವಾಗಿದೆ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಿಟ್ಟಿನಲ್ಲಿರುವ ಯೆಸ್ ಬ್ಯಾಂಕಿನ ಮೇಲೆ ಆರ್ಬಿಐ ನಿಷೇಧ ಹೇರಿದ ಬಳಿಕ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, "ಯೆಸ್ ಬ್ಯಾಂಕ್ನಲ್ಲಿ ಠೇವಣಿ ಇರಿಸಿದವರ ಹಣ ಸುರಕ್ಷಿತವಾಗಿದೆ ಎಂದು ನಾನು ಭರವಸೆ ನೀಡುತ್ತೇನೆ ಎಂದಿದ್ದಾರೆ.
ಆರ್ಬಿಐ ಹಾಗೂ ಸರ್ಕಾರ ಯೆಸ್ ಬ್ಯಾಂಕಿನ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದೆ. ಠೇವಣಿದಾರರ, ಬ್ಯಾಂಕ್ ಹಾಗೂ ಆರ್ಥಿಕತೆಯ ಹಿತದೃಷ್ಟಿಯಿಂದ ಸಮಸ್ಯೆ ಬಗೆಹರಿಸಲಾಗುತ್ತದೆ. ಎಲ್ಲರ ಹಿತ ಕಾಪಾಡಲಾಗುತ್ತದೆ ಎಂದು ಹೇಳಿದ್ದಾರೆ.
ನಾನು ಆರ್ಬಿಐನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಸೆಂಟ್ರಲ್ ಬ್ಯಾಂಕ್ ಎಲ್ಲವನ್ನು ಕೂಲಂಕುಷವಾಗಿ ಅವಲೋಕನ ಮಾಡಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ನಿಡುವ ಭರವಸೆ ನೀಡಿದೆ ಎಂದು ತಿಳಿಸಿದ್ದಾರೆ.