ಚಿಕ್ಕಬಳ್ಳಾಪುರ ಮಾ 6 (Daijiworld News/MSP): ಕೊರೋನಾ ಸೋಂಕಿಗೆ ಒಳಗಾದ ಕಾರ್ಮಿಕರಿಗೆ 28 ದಿನಗಳ ರಜೆ ನೀಡಲು ಕ್ರಮಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ಗೆ ಸೂಚಿಸಿದ್ದು, ಅದರಂತೆ ಇ.ಎಸ್.ಐ. ಕಾಯ್ದೆ ಅನ್ವಯವಾಗುವ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸೋಂಕಿಗೆ ಒಳಗಾಗಿದ್ದರೆ 28 ದಿನಗಳ ವೇತನ ಸಹಿತ ರಜೆ ಮಂಜೂರು ಮಾಡಬೇಕು ಹಾಗೂ ಸೋಂಕಿಗೆ ಒಳಗಾದ ಕಾರ್ಮಿಕರು ಇ.ಎಸ್.ಐ ಅಥವಾ ಆಸ್ಪತ್ರೆಗೆ ತೆರಳಿ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು ಇ.ಎಸ್.ಐ ವೈದ್ಯಾಧಿಕಾರಿಗಳು ತುರ್ತಾಗಿ ಪರಿಶೀಲನೆ ನಡೆಸಿ ಅಂತಹ ಕಾರ್ಮಿಕರಿಗೆ ಕಡ್ಡಾಯವಾಗಿ ಪ್ರಮಾಣ ಪತ್ರ ನೀಡಬೇಕು.
ಪ್ರಮಾಣ ಪತ್ರವನ್ನು ಕಾರ್ಮಿಕರು ಸಂಸ್ಥೆಗೆ ಸಲ್ಲಿಸಿದ ಕೂಡಲೇ ರಜೆ ಮಂಜೂರು ಮಾಡಬೇಕು. ಕಾಯ್ದೆ ಅನ್ವಯವಾಗುವ ಸಂಸ್ಥೆಗಳ ಕರ್ನಾಟಕ ಅಂಗಡಿಮತ್ತು ವಾಣಿಜ್ಯ ಸಂಸ್ಥೆಗಳ ಕಲಂ- 15(3) ರನ್ವಯ 28 ದಿನಗಳ ವೇತನ ಸಹಿತ ರಜೆ ನೀಡಬೇಕೆಂದು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿ ಕೊಠಡಿ ಸಂಖ್ಯೆ :ಜಿಎ-1, ನೆಲಮಹಡಿ, ಜಿಲ್ಲಾಡಳಿತ ಭವನ, ಶಿಡ್ಲಘಟ್ಟ ರಸ್ತೆ, ಚಿಕ್ಕಬಳ್ಳಾಪುರ ದೂರವಾಣಿಸಂಖ್ಯೆ: 08156-27719 ಮತ್ತು 277120 ಗೆ ಸಂಪರ್ಕಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿವರಲಕ್ಷ್ಮಿ ಆರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.